ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಚಲಿಸುತ್ತಿದ್ದ ಲಾರಿ ಬುಧವಾರ ಪಲ್ಟಿಯಾಗಿದೆ. ಪರಿಣಾಮ ಹೆದ್ದಾರಿ ಕೆಲಸಕ್ಕೆ ಬಂದಿದ್ದ ಕೊಪ್ಪಳದ ಕಾರ್ಮಿಕ ಸಾವನಪ್ಪಿದ್ದಾನೆ.
ಹುಬ್ಬಳ್ಳಿಯಿಂದ ಅಂಕೋಲಾ ಕಡೆ ಕಂಟೇನರ್ ಚಲಿಸುತ್ತಿತ್ತು. ಈ ಕಂಟೇನರ್’ನಲ್ಲಿ ಕಾರುಗಳಿದ್ದವು. ಅರಬೈಲ್ ಘಟ್ಟದ ತಿರುವಿನಲ್ಲಿ ಕಂಟೇನರ್ ಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ ಇಳಿಜಾರಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಕಂಟೇನರ್ ಗುದ್ದಿತು. ಅದಾದ ನಂತರ ಪಲ್ಟಿಯಾಯಿತು.
ಕೊಪ್ಪಳದ ಕಾರ್ಮಿಕ ಅಮ್ಜದ್ (40) ಸೇರಿ ಹಲವರು ಹೆದ್ದಾರಿ ಹೊಂಡ ಮುಚ್ಚಲು ದುಡಿಯುತ್ತಿದ್ದರು. ಲಾರಿ ಗುದ್ದಿದ ರಭಸಕ್ಕೆ ಅಮ್ಜದ್ ಅಲ್ಲಿಯೇ ಕೊನೆ ಉಸಿರೆಳೆದರು. ಪಿಐ ರಮೇಶ ಹಾನಾಪುರ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.