ಭಟ್ಕಳ: ಭಟ್ಕಳ ದ ಬೆಂಗ್ರೆಯ ಆದರ್ಶ ಪೆಟ್ರೋಲ್ ಬಂಕ್ ಹಿಂದೆ ತೆರಳಿದ ಜೋಗಿ ದೇವಾಡಿಗ ರೈಲಿಗೆ ತಲೆ ಕೊಟ್ಟು ಸಾವನಪ್ಪಿದ್ದಾರೆ.
ಜನತಾ ಕಾಲೋನಿ ಬಳಿಯ ಬಂಗಾರಮಕ್ಕಿ ಕ್ವಾಟರ್ಸನಲ್ಲಿದ್ದ ಜೋಗಿ ದೇವಾಡಿಗ ಕೂಲಿ ಕೆಲಸ ಮಾಡಿಕೊಂಡಿದ್ದರು. ಸರಾಯಿ ಕುಡಿಯುವ ಚಟ ಹೊಂದಿದ್ದ ಅವರು ಮಾನಸಿಕವಾಗಿ ಕುಗ್ಗಿದ್ದರು. ಜ 7ರ ರಾತ್ರಿ ಅವರು ಬೆಂಗ್ರೆಯ ಆದರ್ಶ ಪೆಟ್ರೋಲ್ ಬಂಕ್ ಹಿಂದೆ ಹೋಗಿದ್ದು, ರಶಿಕೇಶ-ಕೊಚ್ಚಿವಲ್ ಎಕ್ಸಪ್ರೆಸ್ ರೈಲು ಬರುವುದನ್ನು ನೋಡಿದರು.
ಕಂಬಿಗೆ ತಲೆ ಕೊಟ್ಟ ಅವರಿಗೆ ರೈಲು ಗುದ್ದಿದ್ದು, ಅಲ್ಲಿಯೇ ಸಾವನಪ್ಪಿದರು. ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಜೋಗಿ ಅವರ ಸಹೋದರ ಅಣ್ಣಪ್ಪ ದೇವಾಡಿಗ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.