ನಾಡು ನುಡಿಯ ಕುರಿತು ಅಭಿಮಾನ ಮೂಡಿಸಲುಸಾಹಿತ್ಯ ಸಮ್ಮೇಳನ ಪೂರಕ ಎಂದು ಮಾಜಿ ಶಾಸಕ ಸುನೀಲ್ ನಾಯ್ಕ ನುಡಿದರು. ಅವರು ಅಳ್ವೆಕೋಡಿಯಲ್ಲಿ ನಡೆದ ಭಟ್ಕಳ ತಾಲೂಕಾ ಹನ್ನೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯ ಕವಿಗೋಷ್ಠಿಯ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಮ್ಮೇಳನ ಅಧ್ಯಕ್ಷ ನಾರಾಯಣ ಯಾಜಿಯವರನ್ನು ಅಭಿನಂದಿಸಿ ಮಾತನಾಡಿದರು ನಾರಾಯಣ ಯಾಜಿಯವರು ತಮ್ಮ ಕೃತಿಗಳ ಮೂಲಕ ಈ ನೆಲದ ಸಾಹಿತ್ಯ ಸಂಸ್ಕೃತಿಗೆ ಕೊಡುಗೆಯನ್ನು ನೀಡಿದ್ದಾರೆ. ಅವರ ಶ್ರೀಮತಿ ದಿ. ಜಯ ಯಾಜಿಯವರು ಕೂಡ ಭಟ್ಕಳ ತಾಲೂಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವನ್ನು ಪಡೆದಿರುವುದು ಶಿರಾಲಿಯ ಗ್ರಾಮಸ್ಥನಾಗಿ ನನಗೆ ಹೆಮ್ಮೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುನಿಲ್ ನಾಯ್ಕರವರಿಗೆ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶಂಕರ ನಾಯ್ಕ ವಹಿಸಿದ್ದರು, ಸಾಹಿತಿ ಆರ್.ಎಸ್
ನಾಯಕ ಆಶಯ ನುಡಿಗಳನ್ನಾಡಿದರು. ಕವಿಗೋಷ್ಠಿಯಲ್ಲಿ ಮಂಜು ಪಕ್ಕಿ, ನೇತ್ರಾವತಿ ಆಚಾರ್ಯ, ಮಂಜುನಾಥ ಯಲ್ವಡಿಕವೂರ, ಕೃಷ್ಣ ಮೊಗೇರ ಅಳ್ವೆಕೋಡಿ, ಚಂದ್ರಶೇಖರ್ ಪಡುವಣಿ ರಾಘವೇಂದ್ರ ಮಡಿವಾಳ ಸುಮಲತಾ ನಾಯಕ್ ಉಮೇಶ್ ಸರ್ಪನ ಕಟ್ಟೆ ಹೇಮಲ ಹೇಮಲತಾ ಶೀಟ್ ಜಯರಾಮ್ ಹೊಸಕೋಟ್ಟ ಸತೀಶ್ ದೇವಾಡಿಗ ವನಿತಾ ಎಚ್, ರಶ್ಮಿ ಭಾಸ್ಕರ್ ನಾಯಕ್ ನಾಗರತ್ನ ನಾಯಕ್ ಶರಾವತಿ ಪಟಗಾರ ತೇಜ ಮುಗೇರ್ ಮುಂತಾದವರು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು ನಾಗೇಶ್ ಮಡಿವಾಳ ಎಲ್ಲರನ್ನು ಸ್ವಾಗತಿಸಿದರೆ ಕೆ ಎಲ್ ಶಾನಭಾಗ ವಂದಿಸಿದರು ಸುರೇಶ್ ಮುರುಡೇಶ್ವರ್ ಮತ್ತು ಜಯಶ್ರೀ ಆಚಾರಿ ಕಾರ್ಯಕ್ರಮ ನಿರೂಪಿಸಿದರು.