ಅಂಕೋಲಾ : ಪೊಲೀಸ್ ಠಾಣೆಯ ಪೇದೆ ನಿತ್ಯಾನಂದ ಕಿಂದಳ್ಕರ್ ಎಂಬುವರು ಇಂದು ಮಧ್ಯಾಹ್ನ 1:45ಕ್ಕೆ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಮೂಲತ: ಕಿನ್ನರ್ ಗ್ರಾಮದವರಾಗಿದ್ದು ಇವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ 2 ವರ್ಷಗಳ ಕಾಲ ಕೆಲಸವನ್ನು ನಿರ್ವಹಿಸಿದ್ದರು.
ಇವರು ಓರ್ವ ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.
ನಿನ್ನೆ ಅಂಕೋಲದಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ಲವಲವಿಕೆಯಿಂದ ಓಡಾಡಿಕೊಂಡು ಕರ್ತವ್ಯ ಮುಗಿಸಿದ ಇವರು ಇಂದು ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ.
ಪೊಲೀಸ್ ಪೇದೆ ನಿತ್ಯಾನಂದ ಕಿಂದಳ್ಕರ್ ಸಾವಿಗೆ ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ. ಪಿಎಸ್ಐ ಉದ್ದಪ್ಪ. ಹಾಗೂ ಇನ್ನುಳಿದ ಪಿಎಸ್ಐ ಗಳು. ಎಲ್ಲ ಸಿಬ್ಬಂದಿ ವರ್ಗ. ಹಾಗೂ ತಾಲೂಕಿನ ನಾಗರಿಕರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.