ಭಟ್ಕಳ: ಒಂದೇ ಬೈಕಿನಲ್ಲಿ ಬಂದ ಮೂವರು ಹೊಟೇಲ್ ಒಳಗೆ ನುಗ್ಗಿ ರಂಪಾಟ ನಡೆಸಿದ್ದಾರೆ. ಹೊಟೇಲಿನಲ್ಲಿದ್ದ ಅಲ್ಲಿದ್ದ ಹಣ ಹಾಗೂ ಕ್ಯಾಮರಾವನ್ನು ಎಗರಿಸಿದ್ದಾರೆ.
ಹೊನ್ನಾವರದ ಹೊನ್ನಾವರದ ಬೇರಂಕಿ ಗಣೇಶ ನಾಯ್ಕ ಅವರು ಕೈಕಿಣಿಯ ಬಸ್ತಿ ಕ್ರಾಸಿನ ಬಳಿ ಅಮೃತ ಫುಡ್‌ಲೈನ್ ಎಂಬ ಹೊಟೇಲ್ ನಡೆಸುತ್ತಾರೆ. ಮಂಗಳವಾರ ನಸುಕಿನ 3 ಗಂಟೆ ಅವಧಿಯಲ್ಲಿ ಅವರ ಹೊಟೇಲಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮೂವರು ಮುಸುಕುದಾರಿಗಳು ಒಂದೇ ಬೈಕಿನಲ್ಲಿ ಬಂದು ಹೊಟೇಲಿನ ಬಾಗಿಲು ಒಡೆದಿದ್ದಾರೆ.
ಹೊಟೇಲ್ ಒಳಗೆ ನುಗ್ಗಿದ ಕಳ್ಳರು ಎಲ್ಲಾ ಕಡೆ ಸುತ್ತಾಡಿ ಕ್ಯಾಶ್ ಕೌಂಟರಿನಲ್ಲಿದ್ದ 3 ಸಾವಿರ ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಜೊತೆಗೆ ಅಲ್ಲಿಂದ ಡಿಎಸ್‌ಎಲ್‌ಆರ್ ಕ್ಯಾಮರಾವನ್ನು ಸಹ ಅಪಹರಿಸಿದ್ದಾರೆ. ಈ ಮುವರು ಕಳ್ಳರು ಮುಖಕ್ಕೆ ಮುಸುಕು ಹಾಕಿಕೊಂಡಿದ್ದರಿoದ ಅವರ ಗುರುತು ಪತ್ತೆಯಾಗಿಲ್ಲ. ಕಳ್ಳರು ನಡೆಸಿದ ರಂಪಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.