ಕುಮಟಾ-ಖಾಸಗಿ ಬಸ್ಸು ಹಾಗೂ ರಿಕ್ಷಾ ನಡುವೆ ಅಪಘಾತ ನಡೆದಿದ್ದು, ಆಟೋ ಪ್ರಯಾಣಿಕ ದಿನೇಶ ಮುಕ್ರಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಕುಮಟಾ ಪಟ್ಟಣದ ಮಣಕಿ ಮೈದಾನದ ಚರ್ಚ್ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಬುಧವಾರ ಸಂಜೆ ಅಪಘಾತ ನಡೆದಿದೆ. ಧಾರೇಶ್ವರ ಮಠದ ಕೇರಿ ನಿವಾಸಿ ದಿನೇಶ ಗೋವಿಂದ ಮುಕ್ರಿ (30) ಸಾವನಪ್ಪಿದವರು. ಅವರು ತಮ್ಮ ಸ್ನೇಹಿತ ಧಾರೇಶ್ವರದ ಭಾಸ್ಕರ್ ರಾಮ ಪಟಗಾರ ಎಂಬುವವರ ಆಟೋ ಮೇಲೆ ಕುಮಟಾಕ್ಕೆ ಬಂದಿದ್ದರು. ಮರಳಿ ಧಾರೇಶ್ವರಕ್ಕೆ ತೆರಳಲು ಮಾಸ್ತಿಕಟ್ಟೆ ಸರ್ಕಲ್‍ನಿಂದ ಗಿಬ್ ಸರ್ಕಲ್ ಕಡೆಗೆ ಸಾಗುತ್ತಿರುವಾಗ ಮಂಗಳೂರಿನಿಂದ ಮುಂಬೈ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಆಟೋಗೆ ಡಿಕ್ಕಿ ಹೊಡೆದಿದೆ.
ಆಟೊ ಚಾಲಕ ಭಾಸ್ಕರ್ ಪಟಗಾರ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಅಪಘಾತದಲ್ಲಿ ಆಟೋ ಸಂಪೂರ್ಣ ಜಖಂ ಆಗಿದೆ..