ಭಟ್ಕಳ-ಭಟ್ಕಳದಲ್ಲಿ ಅಕ್ರಮ ಗೋಸಾಗಾಟ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ದಿನಂಪ್ರತಿ ಅಕ್ರಮ ಜಾನುವಾರುಗಳ ಸಾಗಾಟ ಪತ್ತೆಯಾಗುತ್ತಿದ್ದು,ಈ ಬಗ್ಗೆ ಸೂಕ್ತ ಕ್ರಮ ಆಗಬೇಕು. ಶಿರಾಲಿ ಸೇರಿದಂತೆ ತಾಲ್ಲೂಕಿನ ಚೆಕ್ ಪೋಸ್ಟಗಳನ್ನು ಮತ್ತಷ್ಟು ಬಿಗುಗೊಳಿಸಬೇಕು. ರಾತ್ರಿ ವೇಳೆ ಇಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಜಾನುವಾರುಗಳನ್ನು ಅಕ್ರಮವಾಗಿ ಮತ್ತು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದು, ಇದು ತೀರಾ ಖಂಡನೀಯ. ಅಕ್ರಮವಾಗಿ ಯಾವುದೇ ವ್ಯಕ್ತಿಗಳು ಜಾನುವಾರು ಸಾಗಾಟ ಮಾಡಿದರೂ ಅಂಥವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕು. ಗೋವುಗಳನ್ನು ಹಿಂದೂಗಳು ಪೂಜಿಸುತ್ತಿದ್ದು, ಗೋವುಗಳ ಹತ್ಯೆ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಸರಿಯಲ್ಲ. ಭಟ್ಕಳದಲ್ಲಿ ಪದೇ ಪದೇ ಅಕ್ರಮ ಜಾನುವಾರು ಸಾಗಾಟ ನಡೆಯುತ್ತಿದ್ದು ಇದನ್ನು ತಡೆಯುವ ಕೆಲಸ ಆಗಬೇಕು. ಅಕ್ರಮ ಜಾನುವಾರು ಸಾಗಾಟದ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸುತ್ತೇವೆ. ಜಾನುವಾರುಗಳನ್ನು ತುಂಬಿಕೊಂಡು ಹೊರಗಿನಿಂದ ಬರುವ ವಾಹನಗಳು ಮತ್ತು ಅದನ್ನು ತರುವ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು.
ಹಿಂಜಾವೇ ಹೋರಾಟಕ್ಕೆ ಬೆಂಬಲ
ಇದೇ ಬರುವ ದಿನಾಂಕ ೧೭-೦೩-೨೦೨೫ ರ ಸೋಮವಾರ ಸಮಯ ೧೦-೩೦ ಕ್ಕೆ ಭಟ್ಕಳದಲ್ಲಿ ದಿನಂಪ್ರತಿ ನಡೆಯುತ್ತಿರುವ ಗೋ ಹತ್ಯೆ ಹಾಗೂ ಅಕ್ರಮ ಗೋ ಸಾಗಾಟವನ್ನು ಖಂಡಿಸಿ ಸಹಾಯಕ ಆಯುಕ್ತರಿಗೆ ಹಿಂದೂ ಜಾಗರಣ ವೇದಿಕೆ ಮನವಿ ಸಲ್ಲಿಸಲಿದ್ದು, ಇದಕ್ಕೆ ನಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲವಿದ್ದು, ಅಂದು ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಕ್ರಮ ಗೋವು ಸಾಗಾಟವನ್ನು ಬಲವಾಗಿ ಖಂಡಿಸಬೇಕು ಎಂದು ಕೋರುತ್ತೇವೆ ಎಂದು ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷರು ತಿಳಿಸಿದ್ದಾರೆ.