ಕಾರವಾರ : 2018 ರಲ್ಲಿ ಸರ್ವೆ ಅಧಿಕಾರಿ ಒಬ್ಬರ ಕರ್ತವ್ಯಕ್ಕೆ ಪತ್ರಕರ್ತ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಕಾರವಾರದ ಸಿಜೆಎಂ ನ್ಯಾಯಾಲಯ ಪತ್ರಕರ್ತ ಉದಯ ನಾಯ್ಕ ಬರ್ಗಿ ಎನ್ನುವವರಿಗೆ ಆರು ಸಾವಿರ ರೂಪಾಯಿ ದಂಡ ತಪ್ಪಿದ್ದಲ್ಲಿ ತಲಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪತ್ರಕರ್ತ ಉದಯ ಬರ್ಗಿ ಅವರು ಅರ್ಜಿ ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯವು ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.
ಸರ್ವೆ ಅಧಿಕಾರಿ ವೇಣುಗೋಪಾಲ ಎಂಬುವವರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ಸಾರ್ವಜನಿಕರ ಕೆಲಸಗಳಿಗೆ ತೀವ್ರ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಸಾರ್ವಜನಿಕರಿಂದಲ್ಲೇ ಆರೋಪ ಕೇಳಿ ಬಂದಿದ್ದವು, ಅಲ್ಲದೆ ಇವರು ಕರ್ತವ್ಯದಲ್ಲಿರುಗಾಗಲೇ ಕೆಲ ಸರಕಾರಿ ಅಧಿಕಾರಿಗಳ ವಿರುದ್ಧವೇ ಸಾಕಷ್ಟು ಗಲಾಟೆ ಮಾಡಿಕೊಂಡಿದ್ದು, ಇವರ ವಿರುದ್ಧ ಕರ್ತವ್ಯದಲ್ಲಿರುವಾಗ ಬೇರೆ ಬೇರೆ ಕಡೆಯಲ್ಲಿ ಸರ್ವೆ ಅಧಿಕಾರಿ ವಿರುದ್ದ ದೂರು ದಾಖಲು ಹಾಗೂ ಸರಕಾರದ ಹಣ ದುರ್ಬಳಕೆ ಬಗ್ಗೆ ಸಾಕಷ್ಟು ಆರೋಪ ಕೇಳಿ ಬಂದಿದ್ದವು.
ಈ ಆರೋಪದ ಹಿನ್ನಲೆಯಲ್ಲಿ ಪತ್ರಕರ್ತರಾಗಿರುವ ಉದಯ ನಾಯ್ಕ ಬರ್ಗಿ ಅವರು ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಲು ಸರ್ವೆ ಅಧಿಕಾರಿಯಾಗಿರುವ ವೇಣುಗೋಪಾಲ ಕಚೇರಿ ಒಳಗೆ ಪ್ರವೇಶಿಸಿದ್ದರು. ಕುರಿತು ಪತ್ರಕರ್ತ ಉದಯ ನಾಯ್ಕ ಬರ್ಗಿ ಅವರು ವೇಣುಗೋಪಾಲ ಅವರ ಬಳಿ ಪ್ರಶ್ನಿಸುತ್ತಿದ್ದಂತೆ ವೇಣುಗೋಪಾಲ ಅವರು ಪತ್ರಕರ್ತ ಉದಯ್ ನಾಯ್ಕ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆ ಮಾಡಲು ಯತ್ನಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಶ್ನಿಸಲು ಹೋಗಿದ್ದ ಪತ್ರಕರ್ತ ಉದಯ್ ಬರ್ಗಿ ಅವರನ್ನೇ ಕಚೇರಿಯಿಂದ ಹೊರ ಹಾಕಿ ಅವರ ವಿರುದ್ಧ ದೂರು ದಾಖಲಿಸಿದ್ದರು.
ಇನ್ನೂ ಇದೆ ಪ್ರಕರಣಕ್ಕೆ ಸಂಬಂಧಿಸಿ ಕೆಲ ದಿನಗಳಲ್ಲೆ ವೇಣುಗೋಪಾ ಅವರನ್ನ ಕಾರವಾರ ಕಚೇರಿಯಿಂದ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ದೂರು-ಪ್ರತಿದೂರು ಕೂಡ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ಉದಯ ನಾಯ್ಕ ಬರ್ಗಿ ಅವರಿಗೆ ಆರು ಸಾವಿರ ದಂಡ ತಪ್ಪಿದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಎಂದು ತೀರ್ಪು ನೀಡಿದ್ದು ಇದನ್ನ ಪ್ರಶ್ನಿಸಿ ಪತ್ರಕರ್ತ ಉದಯ ನಾಯ್ಕ ಬರ್ಗಿ ಅವರು ಮೇಲ್ಮನವಿ ಸಲ್ಲಿಸಿದ್ದರು.
ಪತ್ರಕರ್ತ ಉದಯ ನಾಯ್ಕ ಪರವಾಗಿ ಕುಮಟಾದ ಖ್ಯಾತ ಯುವ ನ್ಯಾಯವಾದಿ, ವಿರೇಂದ್ರ ಗಿರಿಯಣ್ಣ ನಾಯಕ, ತೋರ್ಕೆ ಅವರು ವಾದವನ್ನು ಮಂಡಿಸಿದ್ದರು. ಇವರ ವಾದ ಆಲಿಸಿದ ಮಾನ್ಯ ನ್ಯಾಯಾಲಯವು ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.