ಭಟ್ಕಳ- ಉತ್ತರ ಕನ್ನಡ ಜಿಲ್ಲೆಯ ಎರಡನೆ ಅತಿದೊಡ್ಡ ಜಾತ್ರೆ ಭಟ್ಕಳದ ಗ್ರಾಮದೇವಿ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವು ಜುಲೈ 23 ಬುಧವಾರ ಮುಂಜಾನೆ ಬೆಳ್ಳಿಗೆ ವಿಶ್ವಕರ್ಮ ಸಮಾಜದ ಸುಹಾಸಿನಿ ಪೂಜೆಯ ನಂತರ ದೇವಿಯು ಮೇರವಣೆಗೆ ಮೂಲಕ ಬಂದು ಗದ್ದುಗೆಯಲ್ಲಿ ವಿರಾಜ ಮಾನವಳಾಗಿ ಪ್ರತಿಷ್ಟೆಗೊಳ್ಳುವುದರ ಮೂಲಕ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವು ವಿಧ್ಯುಕ್ತವಾಗಿ ಇಂದು ಚಾಲನೆ ದೊರೆಯಿತು.
ಇಂದು ಮುಂಜಾನೆಯಿಂದಲೇ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಜನರು ಬಂದು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದಲು ದೇವಿಯ ದರುಶನ ಭಕ್ತರು ಆಗಮಿಸಲಿದ್ದಾರೆ.
ಇಂದಿನಿಂದ ಎರಡು ದಿನಗಳ ಕಾಲ ದೇವಿಯ ಮುಂಬಾಗದಲ್ಲಿ ಹಲವಾರು ಸೇವೆಗಳು ನಡೆಯಲಿದೆ ಹಣ್ಣುಕಾಯಿ ಸೇವೆ ,ಬೆಳ್ಳಿಯ ಕಣ್ಣಿನ ಸೇವೆ ,ಬಣ್ಣ ಸೇವೆ ,ಹುಡಿ ಸೇವೆ ಮುಂತಾದ ಸೇವೆಗಳು ದೇವಿಯ ಸಾನಿಧ್ಯದಲ್ಲಿ ನಡೆಯಲಿದೆ.
ಇತಿಹಾಸದಿಂದಲೂ ಭಟ್ಕಳದ ಗ್ರಾಮದೇವಿ ಮಾರಿಕಾಂಭ ದೇವಿಯಲ್ಲಿ ಭಕ್ತಿಯಿಂದ ಮನಸ್ಸನಿಂದ ಬೇಡಿಕೊಂಡರೆ ಸಾಂಕ್ರಾಮೀಕ ರೋಗ ಮಾರಕ ಕಾಯಿಲೆಗಳು, ಕಷ್ಟ ಕಾರ್ಪಣ್ಯಗಳು, ದೂರ ಮಾಡುತ್ತಾಳೆ ಎನ್ನುವ ನಂಬಿಕೆ ಇದೆ.ಪ್ರಥಮ ದಿನ ಗ್ರಾಮೀಣ ಭಾಗ,ಹಾಗೂ ಎರಡನೆ ದಿನ ನಗರ ಭಾಗದವರು ಹಬ್ಬ ಮಾಡುವುದು ವಾಡಿಕೆಯಿಂದ ನಡೆದುಕೊಂಡು ಬಂದಿದೆ.
ಜಾತ್ರೆಯ ಎರಡನೆ ದಿನ ಭಕ್ಥರ ದರ್ಶನ ನಂತರ ಗುರುವಾರ ಮಧ್ಯಾಹ್ನ 4:30 ರ ವಿಸರ್ಜನಾ ಪೂಜೆಯ ನಂತರ ದೇವಿಯನ್ನು ಎಳು ಕಿಲೊಮೀಟರ್ ತನಕ ದೇವಿಯನ್ನು ತಲೆಯ ಮೇಲೆ ಹೊತ್ತು ಸಾಗಿ ಜಾಲಿಯ ಸಮುದ್ರ ತಟದಲ್ಲಿ ದೇವಿಯನ್ನು ವಿಸರ್ಜಿಸುವ ಮೂಲಕ ಎರಡು ದಿನಗಳ ಜಾತ್ರಾ ಸಂಭ್ರಮಕ್ಕೆ ಸು ಸಂಪನ್ನಗೊಳಿಸಲಾಗುತ್ತದೆ.ಈ ಭಾರಿ ದೇವಿಯ ವಿಸರ್ಜನಾ ಮೆರವಣಿಗೆ ಮುಗಿಸಿ ನಂತರ ವಾಪಸು ಬರುವ ಭಕ್ತರಿಗೆ ಆಡಳಿತ ಕಮಿಟಿ ವಾಹನದ ವ್ಯವಸ್ಥೆ ಕಲ್ಪಿಸಿದೆ.
ಜಾತ್ರೆಯ ಪ್ರಯುಕ್ತ ಪೋಲಿಸ್ ಇಲಾಖೆಯಿಂದ ಬಿಗಿ ಪೋಲಿಸ್ ಬಂದೊಬಸ್ಥ್ ಕಲ್ಪಿಸಲಾಗಿದೆ. ಈಗಾಗಲೇ ಹೊಸದಾಗಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ ವರಿಷ್ಠಾಧಿಕಾರಿ ಯಾಗಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನೂತನ ಎಸ್.ಪಿ ದೀಪಕ್. ಎಂ.ಎನ್ ಅವರು ರವಿವಾರ ಭಟ್ಕಳ ಕ್ಕೆ ಆಗಮಿಸಿ ಹಿಂದೂ ಮುಸ್ಲಿಂ ಎಲ್ಲ ಸಮಾಜದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ನೂತನ ಎಸ್.ಪಿ ಅವರು ದೇವಿಯ ವಿಸರ್ಜನಾ ಮಾಡುವ ಜಾಲಿ ಸಮುದ್ರ ತೀರಕ್ಕೆ ತೆರಳಿ ಸ್ಥಳ ಪರಿಶೀಲಿನೆ ನಡೆಸಿದ್ದಾರೆ.ಒಟ್ಟಿನಲ್ಲಿ ಭಟ್ಕಳದಲ್ಲಿ ಮಾರಿ ಜಾತ್ರೆಯೆ ಸಂಭ್ರಮ ಎಲ್ಲರ ಮನೆಮನೆಯಲ್ಲು ಮುಗಿಲುಮುಟ್ಟಿದೆ, ದೇವಿಯು ಗದ್ದುಗೆಯಲ್ಲಿ ಪ್ರತಿಷ್ಠೆಗೊಂಡಿದ್ದು ಭಕ್ತರು ಜೋರಾದ ಮಳೆಯನ್ನು ಲೆಕ್ಕಿಸದೆ ಸಾಲು ಸಾಲಾಗಿ ಬಂದು ದೇವಿಯ ದರ್ಶನ ಪಡೆಯುತ್ತಿದ್ದಾರೆ.