ಶಿರಸಿ- ಸಾರ್ವಜನಿಕ ಕೆಲಸ ಮಾಡಿಕೊಡಲು ಲಂಚ ಪ್ರಕರಣದಲ್ಲಿ ಭಾಗಿಯಾಗಿರುವ ಶಿರಸಿ ನಗರಸಭೆ ಮಾಜಿ ಅಧ್ಯಕ್ಷ ಭ್ರಷ್ಟ ಗಣಪತಿ ನಾಯ್ಕ ಹಾಗೂ ಭ್ರಷ್ಟ ಕಂದಾಯ ಅಧಿಕಾರಿ ಆರ್ ಎಂ ವರ್ಣೇಕರ್ ಅವರಿಗೆ ಕೋರ್ಟ್ ಲ್ಲಿ ಜಾಮೀನು ಸಿಗದೆ ಜೈಲು ಊಟವೇ ಗತಿಯಾಗಿದೆ. ಲಂಚ ಪ್ರಕರಣ ದಲ್ಲಿ ಸಿಕ್ಕಿಬಿದ್ದ ಅವರಿಬ್ಬರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕಾರ ಮಾಡಿದೆ.
ಈ ಇಬ್ಬರು ಶಿರಸಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಕಬ್ಬಿಣ್ಣದ ಪೈಪ್ ಕಳ್ಳತನದ ಪ್ರಕರಣ ದ ಆರೋಪದಲ್ಲಿದ್ದರು. ಆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ 3 ಲಕ್ಷ ರೂಪಾಯಿಯ ಲಂಚಕ್ಕೆ ಕೈ ಒಡ್ಡಿ ಹಣಪಡೆಯುವ ವೇಳೆ ಲೋಕಾಯುಕ್ತರು ದಾಳಿಯಲ್ಲಿ ಇಬ್ಬರು 2 ಲಕ್ಷ ಹಣದ ಜೊತೆ ಸಿಕ್ಕಿಬಿದ್ದಿದ್ದರು.
ಶಿರಸಿ ನಗರದ ವಿಕಾಸಾಶ್ರಮ ಮೈದಾನದ ಸಮೀಪ ರಮೇಶ ಹೆಗಡೆ ಎಂಬಾತರ ಜಾಗದ ವಿಷಯವಾಗಿ ಕೆಲಸ ಮಾಡಿಕೊಡಲು ನಗರಸಭೆ ಸದಸ್ಯ ಗಣಪತಿ ನಾಯ್ಕ ಲಂಚಕ್ಕೆ ಬೇಡಿಕೆ ಇಟ್ಟಿದರು. ಭ್ರಷ್ಟ ಕಂದಾಯ ಅಧಿಕಾರಿ ಆರ್ ಎಂ ವರ್ಣೇಕರ್ ಸಹ ಅದರಲ್ಲಿ ಪಾಲು ಕೇಳಿದ್ದು, ಹೀಗಾಗಿ ರಮೇಶ ಹೆಗಡೆ ಅವರು ಲೋಕಾಯುಕ್ತರ ಮೊರೆ ಹೋಗಿದ್ದರು.
ಜುಲೈ 16ರಂದು ಶಿರಸಿ ಎಪಿಎಂಸಿ ಹತ್ತಿರ ಇರುವ ಜಿಯೋ ಕಚೇರಿ ಬಳಿ ಲಂಚ ಸ್ವೀಕರಿಸುವಾಗ ಈ ಇಬ್ಬರು ಸಿಕ್ಕಿಬಿದ್ದರು. ಬಂಧಿತರ ವಿಚಾರಣೆ ನಡೆಯುತ್ತಿದ್ದು, ಈ ನಡುವೆ ಆರೋಪಿತರಿಬ್ಬರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಲೋಕಾಯುಕ್ತರ ಪರವಾಗಿ ನ್ಯಾಯವಾದಿ ಎಲ್ ಎಂ ಪ್ರಭು `ಯಾವುದೇ ಕಾರಣಕ್ಕೂ ಭ್ರಷ್ಟರಿಗೆ ಜಾಮೀನು ಕೊಡಬಾರದು’ ಎಂದು ವಾದಿಸಿದರು. ಆರೋಪಿತರು ಪ್ರಭಾವಿಗಳಿರುವುದರಿಂದ ಸಾಕ್ಷಿ ನಾಶ ಪಡಿಸುವ ಸಾಧ್ಯತೆ ಇದೆ ಎಂದು ನ್ಯಾಯಾಲಯದ ಮನವರಿಕೆ ಮಾಡಿದರು.
ವಾದ ಆಲಿಸಿದ ಸೆಷನ್ಸ್ ಮತ್ತು ವಿಶೇಷ ನ್ಯಾಯಾಧೀಶರಾದ ಡಿ ಎಸ್‌ವಿಜಯಕುಮಾರ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. ಇದೀಗ ಶಿರಸಿ ನಗರಸಭೆ ಮಾಜಿ ಅಧ್ಯಕ್ಷ ಭ್ರಷ್ಟ ಗಣಪತಿ ನಾಯ್ಕ ಹಾಗೂ ಭ್ರಷ್ಟ ಕಂದಾಯ ಅಧಿಕಾರಿ ಆರ್ ಎಂ ವರ್ಣೇಕರ್ ಅವರಿಗೆ ಕೋರ್ಟ್ ಲ್ಲಿ ಜಾಮೀನು ತಿರಸ್ಕರವಾಗಿ ಸೆರಮನೆ ವಾಸ ಮತ್ತು ಜೈಲು ಊಟವೇ ಗತಿಯಾಗಿದೆ.