ಭಟ್ಕಳ- ಮುರುಡೇಶ್ವರ ಉತ್ತರಕೊಪ್ಪ ಬಿಡಕ್ಕಿ ಬೈಲ್ ಅರಣ್ಯ ಪ್ರದೇಶದಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಮುರುಡೇಶ್ವರ ಪೊಲೀಸರು ದಾಳಿ ನಡೆಸಿದ್ದು, ಕೋಳಿ ಜೊತೆ ಜೂಜುಕೋರರ 4 ಬೈಕುಗಳನ್ನು ವಶಕ್ಕೆಪಡೆದಿದ್ದಾರೆ.
ಮುರುಡೇಶ್ವರ ಠಾಣೆಯ ಪಿ.ಎಸ್.ಐ ಹಣಮಂತ ಬಿರಾದಾರ ಅವರಿಗೆ ಕೋಳಿ ಅಂಕದ ಬಗ್ಗೆ ಮಾಹಿತಿ ಬಂದಿತು. ಅವರು ಪೋಲಿಸ್ ತಂಡದೊಂದಿಗೆ ಕಾಡಿನೊಳಗೆ ಪ್ರವೇಶಿಸಿದರು. ಅಲ್ಲಿ ಶನಿಯಾರ ನಾಯ್ಕ, ರಾಘವೇಂದ್ರ ನಾಯ್ಕ, ಗಣಪತಿ ನಾಯ್ಕ ಎಂಬಾತರು ಕೋಳಿ ಕಾಳಗ ಜೂಜಾಟ ನಡೆಸುತ್ತಿದ್ದರು.
ಪೊಲೀಸರನ್ನು ನೋಡಿ ಜೂಜುಕೋರರು ಪರಾರಿಯಾಗಿದ್ದು, ಅಲ್ಲಿದ್ದ 1200ರೂ ಹಣ, 6 ಕೋಳಿ ಹಾಗೂ 4 ಬೈಕುಗಳನ್ನು ಪೊಲೀಸರು ಜಪ್ತು ಮಾಡಿದರು. ಈ ಕಾರ್ಯಾಚರಣೆ ಯಲ್ಲಿ ಮುರುಡೇಶ್ವರ ಪೋಲಿಸ ಠಾಣೆಯ ಸಿಬ್ಬಂದಿ ಸುರೇಂದ್ರ ಅಲಗೇರಿಕರ್, ಸಂಗಪ್ಪ ಹರಿಜನ, ಮಹೇಶ ಸಮನಳ್ಳಿ, ವಿಜಯ ನಾಯ್ಕ, ಯೋಗೇಶ ನಾಯ್ಕ ಭಾಗವಹಿಸಿದ್ದರು.