ಭಟ್ಕಳ- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡ್ಡಿಯ ಸುಮುದ್ರದ ಅಳಿವೆ ಅಂಚಿನಲ್ಲಿ ದೋಣಿ ಮುಗುಚಿ ನಾಲ್ವರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ . ಎರಡು ಮಂದಿಯನ್ನು ರಕ್ಷಿಸಿ ಭಟ್ಕಳ ಸರಕಾರ ಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನಿಡಲಾಗಿದೆ.
*ಘಟನಾ ಸ್ಥಳಕ್ಕೆ ಕರಾವಳಿ ಕಾವಲು ಪಡೆ ಪೋಲಿಸ್ ಹಾಗು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು, ಸುದ್ದಿ ಕೇಳುತ್ತಿದ್ದಂತೆ ಸಾವಿರಾರು ಜನರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.ಒಟ್ಟು ಆರು ಜನರಿದ್ದ ದೋಣಿ ಮೀನುಗಾರಿಕೆಗೆ ಸಾಗುವಾಗ ಅಲೆಯ ರಬಸಕ್ಕೇ ದೋಣಿ ಮುಗುಚಿದೆ.,ನಾಲ್ಕು ಜನ ಅಲೆಗಳ ಅಬ್ಬರಕ್ಕೆ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.ಭಟ್ಕಳದ ಮನೋಹರ ಈರಯ್ಯ ಮೊಗೇರ( 31)ಬೆಳೆ ಬಂದರ್ ನ ಜಾಲಿ ರಾಮ ಮಾಸ್ತಿ ಖಾರ್ವಿ (43 )ರಕ್ಷಣೆಗೊಳಗಾದವರು .
ಜಾಲಿ ಕೋಡಿಯ ರಾಮಕೃಷ್ಣ ಮಂಜು ಮೊಗೇರ( 40) ,ಜಾಲಿ ಕೊಡಿ,ಅಳ್ವೆಕೋಡಿಯ ಸತೀಶ್ ತಿಮ್ಮಪ್ಪ ಮೊಗೇರ (26),ಗಣೇಶ್ ಮಂಜುನಾಥ ಮೊಗೇರ 27 ಅಳ್ವೇಕೋಡಿ ಮುಗ್ರಿ ಮನೆಯ ಕನ್ನಡ ಶಾಲೆಯ ನಿಶ್ಚಿತ ಮೊಗೇರ( 30 )ಈ ನಾಲ್ಕು ಜನ ಸಮುದ್ರದ ಲ್ಲಿ ನಾಪತ್ತೆಯಾದವರಾಗಿದ್ದಾರೆ.
ಪಕ್ಕದ ಉಡುಪಿಯ ಗಂಗೊಳ್ಳಿಯ ನಡೆದ ದುರಂತದ ಘಟನೆ ಮಾಸುವ ಮುನ್ನವೆ ಇತ್ತ ಭಟ್ಕಳದಲ್ಲಿ ನಡೆಸ ಘನಘೋರ ದುರಂತಕ್ಕೆ ಭಟ್ಕಳದ ಮೀನುಗಾರರರು ಹಾಗೂ ಜನತೆ ಶೋಕಸಾಗರದಲ್ಲಿ ಮುಳುಗಿದ್ದಾರೆ.