ಭಟ್ಕಳ- ಮೀನು ಮಾರುಕಟ್ಟೆ ಸ್ಥಳಾಂತರ ಮಾಡುತ್ತಾರೆ ಎಂದು ಮೀನುಗಾರರಿಗೆ ತಪ್ಪುಮಾಹಿತಿ ನೀಡಿ ಗೊಂದಲಮಯ ವಾತಾವರಣ ಸ್ರಷ್ಟಿಮಾಡುವ ಕೆಲಸ ಕೆಲ ದಿನಗಳಿಂದ ವಿರೋಧ ಪಕ್ಷದವರು ಹಾಗೂ ಕೆಲ ಕಿಡಿಗೇಡಿಗಳಿಂದ ನಡೆಯುತ್ತಾ ಬಂದಿದ್ದು, ಇಂದು ಸ್ವತಃ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಭಟ್ಕಳದ ಹಳೆ ಮೀನು ಮಾರುಕಟ್ಟೆ ಯ ಸ್ಥಳಕ್ಕೆ ಬೇಟಿ ನೀಡಿ ಮೀನುಗಾರ ಮಹಿಳೆಯರ ಜೊತೆ ಮುಕ್ತವಾಗಿ ಚರ್ಚಿಸಿದರು.
ಯಾವುದೇ ಕಾರಣಕ್ಕೂ ಹಳೆ ಮೀನು ಮಾರುಕಟ್ಟೆಯನ್ನು ಸ್ಥಳಾಂ ತರ ಮಾಡುವುದಿಲ್ಲ , ಅದು ಈಗಿದ್ದ ಜಾಗದಲ್ಲಿಯೇ ಮುಂದುವರಿಯಲಿದೆ ಎಂದು ಭರವಸೆ ನೀಡಿದರು. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಬದಲಾಗುತ್ತಿರುವ ಪಟ್ಟಣದ ಪರಿಸ್ಥಿತಿಗೆ ತಕ್ಕಂತೆ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ನಿಟ್ಟಿನಲ್ಲಿ ಇನ್ನೊಂದು ಮೀನು ಮಾರುಕಟ್ಟೆ ಪ್ರಾರಂಬಿಸುವುದಾಗಿ ತಿಳಿ ಹೇಳಿ ಮಿನು ಮಾರಾಟ ಮಹಿಳೆಯರಲರಿಗೆ ಅರಿವು ಮೂಡಿಸಿದರು.
ಮೀನುಗಾರರ ಕಷ್ಟ ಕಾರ್ಪಣ್ಯದ ಸಂಪೂರ್ಣ ಅರಿವು ನನಗಿದ್ದು ಆವರಿಗೆ ತೊಂದರೆಯಾಗುವ ಯಾವ ಕೆಲಸಕ್ಕೂ ನಾನು ಬೆಂಬಲ ನೀಡುವುದಿಲ್ಲ ಮತ್ತು ಮೀನುಗಾರರ ಜೊತೆ ನಾನು ಎಲ್ಲಾ ಸಂದರ್ಭಗಳಲ್ಲೂ ಇರುತ್ತೇನೆ ಎಂದು ಭರವಸೆ ನೀಡಿದರು.