ಭಟ್ಕಳ-ಅಕ್ರಮ ಮರಳು ಸಾಗಾಟದ ವಾಹನವನ್ನು ಪತ್ತೆ ಮಾಡಿದ ಭಟ್ಕಳ ಪೊಲೀಸರು ಅಕ್ರಮ ಮರಳು ದಂದೆ ಗೆ ತಡೆ ಒಡ್ಡಿದು, ಸರ್ಕಾರಕ್ಕೆ ವಂಚಿಸಿ ಮರಳು ಮಾರಾಟ ನಡೆಸುತ್ತಿದ್ದ ಶಂಕರ ದೇವಾಡಿಗ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಸೆ 4ರ ನಸುಕಿನ 1 ಗಂಟೆ ಅವಧಿಯಲ್ಲಿ ಬೇಂಗ್ರೆ ಸಣಭಾವಿ ಉಳ್ಮಣದ ಶಂಕರ ದೇವಾಡಿಗ ಅವರು ಅಕ್ರಮವಾಗಿ ಮರಳು ಸಾಗಾಟ ನಡೆಸಿದ್ದರು. ಪರಿಸರಕ್ಕೆ ಹಾನಿಯಾಗುವ ರೀತಿ ಮರಳು ತೆಗೆದ ಅವರು ಸರ್ಕಾರಕ್ಕೂ ರಾಜಧನ ಪಾವತಿಸದೇ ಪರಾರಿಯಾಗುವ ಪ್ರಯತ್ನದಲ್ಲಿದ್ದರು.
ಇದನ್ನು ಅರಿತ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಲಿಂಗಾರೆಡ್ಡಿ ಅವರು ಶಿರಾಲಿ ತಪಾಸಣಾ ಕೇಂದ್ರದ ಬಳಿ ಪಿಕಪ್ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದರು. ಮರಳಿನ ಜೊತೆ ವಾಹನವನ್ನು ವಶಕ್ಕೆಪಡೆದರು.
ಒಟ್ಟು 10 ಸಾವಿರ ರೂ ಮೌಲ್ಯದ ಮರಳಿನ ಜೊತೆ 3 ಲಕ್ಷ ರೂ ಮೌಲ್ಯದ ಪಿಕಪ್ ವಾಹನವನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಜೊತೆಗೆ ಅಕ್ರಮ ಮರಳು ಸಾಗಾಟಗಾರರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.