ಬಾರಿಸು ಕನ್ನಡ ಡಿಂ ಡಿಂಮವ,
ಓ ಕರ್ನಾಟಕ ಹೃದಯ ಶಿವ ಎಂದು ಮನದುಂಬಿ ಹಾಡಿದರು ಕವಿ ಕುವೆಂಪುರವರು. ಕನ್ನಡ ಭಾಷೆಯ ಏಳಿಗೆಗಾಗಿ , ಸ್ವತಂತ್ರ ಚಳುವಳಿ ಹಾಗೂ ಏಕೀಕರಣ ಚಳುವಳಿಗಳು ಕರ್ನಾಟಕದಲ್ಲಿ ಜೊತೆ ಜೊತೆ ಬೆಳೆಯುತ್ತಾ ಬಂದವು. ಅಂದು ಬ್ರಿಟಿಷ್ ಆಳ್ವಿಕೆಯ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳು ಕರ್ನಾಟಕದ ಮೇಲೆ ಅಗಾಧವಾದ ಪರಿಣಾಮ ಬಿರಿದವು,ಕಾರಣ 1763 ರಿಂದ1857ರವರೆಗೆ ಕರ್ನಾಟಕದ ಒಂದಲ್ಲ ಒಂದು ಭಾಗದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಟ ನಡೆಯುತ್ತಲೇ ಇತ್ತು.
ಕನ್ನಡಿಗರು ಪ್ರಾಂತೀಯತೆಯ ಅಭಿಮಾನದ ಜೊತೆಗೆ ರಾಷ್ಟ್ರೀಯತೆಯ ಅಭಿಮಾನವನ್ನು ಬೆಳೆಸಿಕೊಂಡು ಸ್ವತಂತ್ರ ಚಳುವಳಿಯಲ್ಲಿ ಧುಮುಕಿದರು. ಭಾರತದ ಸ್ವತಂತ್ರ ಹೋರಾಟದ ಇತಿಹಾಸದಲ್ಲಿ _1885 ಸ್ಥಾಪನೆಗೊಂಡ ರಾಷ್ಟ್ರೀಯ ಕಾಂಗ್ರೆಸ್ ಪ್ರಮುಖವಾದುದು. 1907 ರ ಸೂರತ್ ಕಾಂಗ್ರೆಸ್ ಅಧಿವೇಶನಕ್ಕೆ ಕರ್ನಾಟಕದಿಂದ ಆಲೂರು ವೆಂಕಟರಾವ್,ಧಾರವಾಡದ ಅಣ್ಣಾಚಾರ್ಯ,ವಿಜಾಪುರದ ಕೌಜಲಗಿ, ಬೆಳಗಾವಿಯ ಗೋವಿಂದರಾವ್ ಯಾಳಗಿ,ಗಂಗಾಧರ ದೇಶಪಾಂಡೆ ಭಾಗವಹಿಸಿದ್ದರು.
ಕರ್ನಾಟಕದ ಲ್ಲಿ ಪ್ರಥಮ ಬಾರಿಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧೀವೇಶನ ಬೆಳಗಾಂನಲ್ಲಿ 1924 ರಲ್ಲಿ ಜರುಗಿತು, ಅಧ್ಯಕ್ಷತೆಯನ್ನು ಗಾಂಧೀಜಿಯವರು ವಹಿಸಿದ್ದರು. ಡಾ. ಹರ್ಡೇಕರ್ ರವರು ಸ್ಥಾಪಿಸಿದ ಹಿಂದೂಸ್ಥಾನಿ ಸೇವಾದಳವು ಅಧಿವೇಶನದ ವ್ಯವಸ್ಥೆಯನ್ನು ನೋಡಿಕೊಂಡಿತು. ೧೯೩೦ ರಲ್ಲಿ ಗಾಂಧೀಜಿಯವರು ಪ್ರಾರಂಭಿಸಿದ ಕಾನೂನು ಭಂಗ ಚಳುವಳಿಯಲ್ಲಿ ಕರ್ನಾಟಕದವರು ಉತ್ಸಾಹದಿಂದ ಭಾಗವಹಿಸಿದ್ದರು. ಗಾಂಧೀಜಿಯವರು ಆರಂಭಿಸಿದ ದಂಡಿಯಾತ್ರೆಗೆ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ೧೬ ವರ್ಷದ ಮೈಲಾರ ಮಹಾದೇವಪ್ಪ ಭಾಗವಹಿಸಿದ್ದರು.
ಉಪ್ಪಿನ ಸತ್ಯಾಗ್ರಹ :ದಂಡಿಯಾತ್ರೆಯನ್ನು ಅನುಸರಿಸಿ ೧೯೩೦ ರ ಏಪ್ರಿಲ್ ೧೩ ರಂದು ಎಂ.ಪಿ.ನಾಡಕರ್ಣಿಯವರ ನೇತೃತ್ವದಲ್ಲಿ ಹತ್ತುಸಾವಿರ ಜನರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಸೇರಿ ಉಪ್ಪಿನ ಸತ್ಯಾಗ್ರಹ ಆಚರಿಸಿದರು. ಇದರಲ್ಲಿ ಕಾರ್ನಾಡ್ ಸದಾಶಿವರಾಯ್, ಎನ್.ಎಸ್.ಹರ್ಡೇಕರ , ಆರ್.ಆರ್.ದಿವಾಕರ ಮುಂತಾದವರು ಭಾಗವಹಿಸಿದ್ದರು. ಉಪ್ಪಿನ ಸತ್ಯಾಗ್ರಹವು ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಿಜಾಪುರ,
ಧಾರವಾಡ ಮೊದಲಾದ ಸ್ಥಳಗಳಲ್ಲಿ ನಡೆಯಿತು. ಅಂಕೋಲಾ ತಾಲೂಕಿನ ಜೋಗಿ ನಾಯಕ, ಬೊಮ್ಮಯ್ಯ ನಾಯಕ, ತಿಮ್ಮಕ್ಕ ಹೀಗೆ ಹಲವು ಮಹನೀಯರು ಭಾಗವಹಿಸಿದ್ದರು. ಸಾಣೆಕಟ್ಟಾದಲ್ಲಿ ಉಪ್ಪಿನ ತಯಾರಿಕಾ ಕಟ್ಟೆಯ ಮೇಲೆ ಸತ್ಯಾಗ್ರಹಿಗಳು ದಾಳಿ ಮಾಡಿದರು. ಅಂಕೋಲಾದಲ್ಲಿ ಹಲವಾರು ಬಾರಿ ಉಪ್ಪಿನ ಸತ್ಯಾಗ್ರಹ ನಡೆಸಿ ಸುಂಕವಾದ ಉಪ್ಪನ್ನು ಸಾವಿರಾರು ಚೀಲ ಮಾರಲಾಯಿತು. ನಿಜ ಲಿಂಗಪ್ಪನವರು ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸುವ ಮೂಲಕ ಸ್ವತಂತ್ರ್ಯ ಹೋರಾಟಕ್ಕೆ ಧುಮುಕಿದರು. ಬಳ್ಳಾರಿ ಸಿದ್ಧಮ್ಮ,ರಾಜಶೇಖರಯ್ಯ ಹಿರೇಮಠ,ಕೃಷ್ಣಾ ರೆಡ್ಡಿ ಮುಂತಾದವರು ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.೧೯೩೨ ರಲ್ಲಿ ಕರನಿರಾಕರ ಚಳುವಳಿಯುಶಿರಸಿ,ಸಿದ್ಧಾಪುರ,ಅಂಕೋಲಾ ಹಿರೆಕೇರೂರಗಳಲ್ಲಿ ಆರಂಭವಾಯಿತು.
೧೯೩೮ ರ ಶಿವಪುರ ಧ್ವಜ ಸತ್ಯಾಗ್ರಹ ಇದರ ಪ್ರಥಮ ಅಧೀವೇಶನ ಮಂಡ್ಯ ಜಿಲ್ಲೆಯಲ್ಲಿ ನಡೆಯಿತು. ಅಧೀವೇಶನದ ನಂತರ ಸ್ವತಂತ್ರ್ಯ. ಹೋರಾಟ ಉಗ್ರ ರೂಪ ತಾಳಿತು ಸ್ವಯಂ ಸೇವಕ ನಾಯಕರಾದ ಎಚ್.ಸಿ.ದಾಸಪ್ಪ, ಕೆ.ಸಿ.ರೆಡ್ಡಿ, ಬಳ್ಳಾರಿ ಸಿದ್ಧಮ್ಮ ಇವರುಗಳನ್ನು ಬಂಧಿಸಲಾಯಿತು. ಶಿವಪುರ ಧ್ವಜ ಸತ್ಯಾಗ್ರಹ ಹಾಗೂ ವಿದುರಾಶ್ವತ ಘಟನೆಗಳಿಂದಾಗಿ ಕರ್ನಾಟಕ ಸ್ವತಂತ್ರ ಚಳುವಳಿಗೆ ಹುರುಪು ಬಂದಂತಾಗಿ
ಹೋರಾಟ ಬಿರುಸಾಯಿತು.
1942 ರಲ್ಲಿ ಆರಂಭಗೊಂಡ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹಿಂದೆಂದೂ ಕಾಣದಷ್ಟು ಜನಜಾಗೃತಿ ಕರ್ನಾಟಕಲ್ಲಿ ಚಳುವಳಿಯನ್ನು ಪ್ರಕರಗೊಳಿಸಲು ಆರ್.ಆರ್.ದಿವಾಕರ, ಮೈಲಾರ ಮಹಾದೇವಪ್ಪ, ಬಿಂದು ಮಾಧವ, ಕಡಿದಾಳ ಮಂಜಪ್ಪ, ದೊರೆಸ್ವಾಮಿ ಮೊದಲಾದವರು ಚಳುವಳಿಯಲ್ಲಿ ಧುಮುಕಿದರು. ಹಲವು ತಿಂಗಳುಗಳ ಕಾಲ ಈ ಚಳುವಳಿಗಳು ನಡೆದು ಬೆಂಗಳೂರಿನಲ್ಲಿ ನಡೆದ ಉಗ್ರಚಳುವಳಿಯ ಸಂದರ್ಭದಲ್ಲಿ ಹನ್ನೊಂದು ಜನ ಬಲಿಯಾದರು. ಈ ಚಳುವಳಿಯಲ್ಲಿ ಇಪ್ಪತ್ತ್ತೈದು ಸಾವಿರಕ್ಕೂ ಹೆಚ್ಚು ಜನ ಬಂಧಿಸಲ್ಪಟ್ಟಿದ್ದರಿಂದ ಜೈಲುಗಳು ತುಬಿ ಹೋಗಿ ಉಳಿದವರನ್ನು 20-30 ಮೈಲಿ ದೂರದ ನಿರ್ಜನ ಕಾಡಿಗೆ ಬಿಟ್ಟು ಬರುತ್ತಿದ್ದರು.
1942ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿರುವ ಗ್ರಾಮದ ಯುವಕರೆಲ್ಲರು ಗಾಂಧಿಟೋಪಿ ಧರಿಸಿ ಮಾಡು ಇಲ್ಲವೇ ಮಡಿ ಎಂಬ ಘೋಷಣೆಯನ್ನು ಗ್ರಾಮ ಗ್ರಾಮಗಳಲ್ಲೂ ಪ್ರಚಾರ ಮಾಡಿದರು. ಪ್ರತಿ ದಿನ ಟೆಲಿಗ್ರಾಫ್ ತಂತಿ ಕತ್ತರಿಸುವುದು, ಪಿಕೆಟಿಂಗ್ ನಡೆಸುವುದು ಇಂತಹ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿಬಾರಿಸು ಕನ್ನಡ ಡಿಂ ಡಿಂಮವ,ಓ ಕರ್ನಾಟಕ ಹೃದಯ ಶಿವ ಎಂದು ಮನದುಂಬಿ ಹಾಡಿದರು ಕವಿ ಕುವೆಂಪುರವರು. ಕನ್ನಡ ಭಾಷೆಯ ಏಳಿಗೆಗಾಗಿ , ಸ್ವತಂತ್ರ ಚಳುವಳಿ ಹಾಗೂ ಏಕೀಕರಣ ಚಳುವಳಿಗಳು ಕರ್ನಾಟಕದಲ್ಲಿ ಜೊತೆ ಜೊತೆ ಬೆಳೆಯುತ್ತಾ ಬಂದವು. ಅಂದು ಬ್ರಿಟಿಷ್ ಆಳ್ವಿಕೆಯ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳು ಕರ್ನಾಟಕದ ಮೇಲೆ ಅಗಾಧವಾದ ಪರಿಣಾಮ ಬಿರಿದವು,ಕಾರಣ 1763 ರಿಂದ1857ರವರೆಗೆ ಕರ್ನಾಟಕದ ಒಂದಲ್ಲ ಒಂದು ಭಾಗ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡುತ್ತಲೇ ಇತ್ತು.
ಕನ್ನಡಿಗರು ಪ್ರಾಂತೀಯತೆಯ ಅಭಿಮಾನದ ಜೊತೆಗೆ ರಾಷ್ಟ್ರೀಯತೆಯ ಅಭಿಮಾನವನ್ನು ಬೆಳೆಸಿಕೊಂಡು ಸ್ವತಂತ್ರ ಚಳುವಳಿಯಲ್ಲಿ ಧುಮುಕಿದರು. ಭಾರತದ ಸ್ವತಂತ್ರ ಹೋರಾಟದ ಇತಿಹಾಸದಲ್ಲಿ _1885 ಸ್ಥಾಪನೆಗೊಂಡ ರಾಷ್ಟ್ರೀಯ ಕಾಂಗ್ರೆಸ್ ಪ್ರಮುಖವಾದುದು. 1907 ರ ಸೂರತ್ ಕಾಂಗ್ರೆಸ್ ಅಧಿವೇಶನಕ್ಕೆ ಕರ್ನಾಟಕದಿಂದ ಆಲೂರು ವೆಂಕಟರಾವ್,ಧಾರವಾಡದ ಅಣ್ಣಾಚಾರ್ಯ,ವಿಜಾಪುರದ ಕೌಜಲಗಿ, ಬೆಳಗಾವಿಯ ಗೋವಿಂದರಾವ್ ಯಾಳಗಿ,ಗಂಗಾಧರ ದೇಶಪಾಂಡೆ ಭಾಗವಹಿಸಿದ್ದರು.
ಕರ್ನಾಟಕದ ಲ್ಲಿ ಪ್ರಥಮ ಬಾರಿಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧೀವೇಶನ ಬೆಳಗಾಂನಲ್ಲಿ 1924 ರಲ್ಲಿ ಜರುಗಿತು, ಅಧ್ಯಕ್ಷತೆಯನ್ನು ಗಾಂಧೀಜಿಯವರು ವಹಿಸಿದ್ದರು. ಡಾ. ಹರ್ಡೇಕರ್ ರವರು ಸ್ಥಾಪಿಸಿದ ಹಿಂದೂಸ್ಥಾನಿ ಸೇವಾದಳವು ಅಧಿವೇಶನದ ವ್ಯವಸ್ಥೆಯನ್ನು ನೋಡಿಕೊಂಡಿತು. ೧೯೩೦ ರಲ್ಲಿ ಗಾಂಧೀಜಿಯವರು ಪ್ರಾರಂಭಿಸಿದ ಕಾನೂನು ಭಂಗ ಚಳುವಳಿಯಲ್ಲಿ ಕರ್ನಾಟಕದವರು ಉತ್ಸಾಹದಿಂದ ಭಾಗವಹಿಸಿದ್ದರು. ಗಾಂಧೀಜಿಯವರು ಆರಂಭಿಸಿದ ದಂಡಿಯಾತ್ರೆಗೆ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ೧೬ ವರ್ಷದ ಮೈಲಾರ ಮಹಾದೇವಪ್ಪ ಭಾಗವಹಿಸಿದ್ದರು.
ಉಪ್ಪಿನ ಸತ್ಯಾಗ್ರಹ :ದಂಡಿಯಾತ್ರೆಯನ್ನು ಅನುಸರಿಸಿ ೧೯೩೦ ರ ಏಪ್ರಿಲ್ ೧೩ ರಂದು ಎಂ.ಪಿ.ನಾಡಕರ್ಣಿಯವರ ನೇತೃತ್ವದಲ್ಲಿ ಹತ್ತುಸಾವಿರ ಜನರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಸೇರಿ ಉಪ್ಪಿನ ಸತ್ಯಾಗ್ರಹ ಆಚರಿಸಿದರು. ಇದರಲ್ಲಿ ಕಾರ್ನಾಡ್ ಸದಾಶಿವರಾಯ್, ಎನ್.ಎಸ್.ಹರ್ಡೇಕರ , ಆರ್.ಆರ್.ದಿವಾಕರ ಮುಂತಾದವರು ಭಾಗವಹಿಸಿದ್ದರು. ಉಪ್ಪಿನ ಸತ್ಯಾಗ್ರಹವು ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಿಜಾಪುರ,
ಧಾರವಾಡ ಮೊದಲಾದ ಸ್ಥಳಗಳಲ್ಲಿ ನಡೆಯಿತು. ಅಂಕೋಲಾ ತಾಲೂಕಿನ ಜೋಗಿ ನಾಯಕ, ಬೊಮ್ಮಯ್ಯ ನಾಯಕ, ತಿಮ್ಮಕ್ಕ ಹೀಗೆ ಹಲವು ಮಹನೀಯರು ಭಾಗವಹಿಸಿದ್ದರು. ಸಾಣೆಕಟ್ಟಾದಲ್ಲಿ ಉಪ್ಪಿನ ತಯಾರಿಕಾ ಕಟ್ಟೆಯ ಮೇಲೆ ಸತ್ಯಾಗ್ರಹಿಗಳು ದಾಳಿ ಮಾಡಿದರು. ಅಂಕೋಲಾದಲ್ಲಿ ಹಲವಾರು ಬಾರಿ ಉಪ್ಪಿನ ಸತ್ಯಾಗ್ರಹ ನಡೆಸಿ ಸುಂಕವಾದ ಉಪ್ಪನ್ನು ಸಾವಿರಾರು ಚೀಲ ಮಾರಲಾಯಿತು. ನಿಜ ಲಿಂಗಪ್ಪನವರು ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸುವ ಮೂಲಕ ಸ್ವತಂತ್ರ್ಯ ಹೋರಾಟಕ್ಕೆ ಧುಮುಕಿದರು. ಬಳ್ಳಾರಿ ಸಿದ್ಧಮ್ಮ,ರಾಜಶೇಖರಯ್ಯ ಹಿರೇಮಠ,ಕೃಷ್ಣಾ ರೆಡ್ಡಿ ಮುಂತಾದವರು ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.೧೯೩೨ ರಲ್ಲಿ ಕರನಿರಾಕರ ಚಳುವಳಿಯುಶಿರಸಿ,ಸಿದ್ಧಾಪುರ,ಅಂಕೋಲಾ ಹಿರೆಕೇರೂರಗಳಲ್ಲಿ ಆರಂಭವಾಯಿತು.
೧೯೩೮ ರ ಶಿವಪುರ ಧ್ವಜ ಸತ್ಯಾಗ್ರಹ ಇದರ ಪ್ರಥಮ ಅಧೀವೇಶನ ಮಂಡ್ಯ ಜಿಲ್ಲೆಯಲ್ಲಿ ನಡೆಯಿತು. ಅಧೀವೇಶನದ ನಂತರ ಸ್ವತಂತ್ರ್ಯ. ಹೋರಾಟ ಉಗ್ರ ರೂಪ ತಾಳಿತು ಸ್ವಯಂ ಸೇವಕ ನಾಯಕರಾದ ಎಚ್.ಸಿ.ದಾಸಪ್ಪ, ಕೆ.ಸಿ.ರೆಡ್ಡಿ, ಬಳ್ಳಾರಿ ಸಿದ್ಧಮ್ಮ ಇವರುಗಳನ್ನು ಬಂಧಿಸಲಾಯಿತು. ಶಿವಪುರ ಧ್ವಜ ಸತ್ಯಾಗ್ರಹ ಹಾಗೂ ವಿದುರಾಶ್ವತ ಘಟನೆಗಳಿಂದಾಗಿ ಕರ್ನಾಟಕ ಸ್ವತಂತ್ರ ಚಳುವಳಿಗೆ ಹುರುಪು ಬಂದಂತಾಗಿ
ಹೋರಾಟ ಬಿರುಸಾಯಿತು.
1942 ರಲ್ಲಿ ಆರಂಭಗೊಂಡ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹಿಂದೆಂದೂ ಕಾಣದಷ್ಟು ಜನಜಾಗೃತಿ ಕರ್ನಾಟಕಲ್ಲಿ ಚಳುವಳಿಯನ್ನು ಪ್ರಕರಗೊಳಿಸಲು ಆರ್.ಆರ್.ದಿವಾಕರ, ಮೈಲಾರ ಮಹಾದೇವಪ್ಪ, ಬಿಂದು ಮಾಧವ, ಕಡಿದಾಳ ಮಂಜಪ್ಪ, ದೊರೆಸ್ವಾಮಿ ಮೊದಲಾದವರು ಚಳುವಳಿಯಲ್ಲಿ ಧುಮುಕಿದರು. ಹಲವು ತಿಂಗಳುಗಳ ಕಾಲ ಈ ಚಳುವಳಿಗಳು ನಡೆದು ಬೆಂಗಳೂರಿನಲ್ಲಿ ನಡೆದ ಉಗ್ರಚಳುವಳಿಯ ಸಂದರ್ಭದಲ್ಲಿ ಹನ್ನೊಂದು ಜನ ಬಲಿಯಾದರು. ಈ ಚಳುವಳಿಯಲ್ಲಿ ಇಪ್ಪತ್ತ್ತೈದು ಸಾವಿರಕ್ಕೂ ಹೆಚ್ಚು ಜನ ಬಂಧಿಸಲ್ಪಟ್ಟಿದ್ದರಿಂದ ಜೈಲುಗಳು ತುಬಿ ಹೋಗಿ ಉಳಿದವರನ್ನು 20-30 ಮೈಲಿ ದೂರದ ನಿರ್ಜನ ಕಾಡಿಗೆ ಬಿಟ್ಟು ಬರುತ್ತಿದ್ದರು.
1942ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿರುವ ಗ್ರಾಮದ ಯುವಕರೆಲ್ಲರು ಗಾಂಧಿಟೋಪಿ ಧರಿಸಿ ಮಾಡು ಇಲ್ಲವೇ ಮಡಿ ಎಂಬ ಘೋಷಣೆಯನ್ನು ಗ್ರಾಮ ಗ್ರಾಮಗಳಲ್ಲೂ ಪ್ರಚಾರ ಮಾಡಿದರು. ಪ್ರತಿ ದಿನ ಟೆಲಿಗ್ರಾಫ್ ತಂತಿ ಕತ್ತರಿಸುವುದು, ಪಿಕೆಟಿಂಗ್ ನಡೆಸುವುದು ಇಂತಹ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ತೀವ್ರವಾಗಿ ಪ್ರತಿಭಟನೆ ಗೈದ ಗೊರಪ್ಪ, ಮಲ್ಲಪ್ಪ, ಸೂರ್ಯ ನಾರಾಯಣಾಚಾರ್ಯ,ಶಂಕರಪ್ಪ ಇವರುಗಳಿಗೆ 1973 ರ ಮಾರ್ಚ್ 8,9,10 ರಂದು ಬೆಂಗಳೂರು ನಗರದ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಕರ್ನಾಟಕದ ಸ್ವತಂತ್ರ ಹೋರಾಟದಲ್ಲಿ ಈಸೂರು ಗ್ರಾಮದ ಹೋರಾಟವು ಚಿರಸ್ಮರಣೀಯವಾಗಿದೆ.
ಶೌರ್ಯದ ಪ್ರತೀಕವಾದ ಕನ್ನಡಿಗರು ಸ್ವತಂತ್ರ ಚಳುವಳಿಯಲ್ಲಿ ಕೂಡ ತಮ್ಮ ಛಾಪನ್ನು ಮೂಡಿಸಿ ಕನ್ನಡ ತಾಯಿ ಭುವನೇಶ್ವರಿ ಯ ಕೆಚ್ಚೆದೆಯ ಸುಪುತ್ರರು,
ಗಂಡು ಮೆಟ್ಟಿದ ನಾಡಿನ ಧೀರರು
ಕನ್ನಡದ ಕುಲದೀಪಕರು ವೀರ ವನಿತೆಯರ ಸಾಹಸಿ ಪುತ್ರರೆಂದು ಜಗತ್ತಿಗೆ ಸಾರಿದ ಕನ್ನಡ ನಾಡಿನ ಹೆಮ್ಮೆಯ ಸಿಂಹಮಣಿಗಳು ಕನ್ನಡಿಗರು.ತೀವ್ರವಾಗಿ ಪ್ರತಿಭಟನೆ ಗೈದ ಗೊರಪ್ಪ, ಮಲ್ಲಪ್ಪ, ಸೂರ್ಯ ನಾರಾಯಣಾಚಾರ್ಯ,ಶಂಕರಪ್ಪ ಇವರುಗಳಿಗೆ 1973 ರ ಮಾರ್ಚ್ 8,9,10 ರಂದು ಬೆಂಗಳೂರು ನಗರದ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಕರ್ನಾಟಕದ ಸ್ವತಂತ್ರ ಹೋರಾಟದಲ್ಲಿ ಈಸೂರು ಗ್ರಾಮದ ಹೋರಾಟವು ಚಿರಸ್ಮರಣೀಯವಾಗಿದೆ.
ಶೌರ್ಯದ ಪ್ರತೀಕವಾದ ಕನ್ನಡಿಗರು ಸ್ವತಂತ್ರ ಚಳುವಳಿಯಲ್ಲಿ ಕೂಡ ತಮ್ಮ ಛಾಪನ್ನು ಮೂಡಿಸಿ ಕನ್ನಡ ತಾಯಿ ಭುವನೇಶ್ವರಿ ಯ ಕೆಚ್ಚೆದೆಯ ಸುಪುತ್ರರು,
ಗಂಡು ಮೆಟ್ಟಿದ ನಾಡಿನ ಧೀರರು
ಕನ್ನಡದ ಕುಲದೀಪಕರು ವೀರ ವನಿತೆಯರ ಸಾಹಸಿ ಪುತ್ರರೆಂದು ಜಗತ್ತಿಗೆ ಸಾರಿದ ಕನ್ನಡ ನಾಡಿನ ಹೆಮ್ಮೆಯ ಸಿಂಹಮಣಿಗಳು ಕನ್ನಡಿಗರು.