
ಭಟ್ಕಳ: ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ ಸ್ಥಾಪನೆಯ ಐದನೇ ವರ್ಷದ ಅಂಗವಾಗಿ ಜೂನ್ 29ರಿಂದ ಜುಲೈ 6, 2026ರವರೆಗೆ ದೇಶಾದ್ಯಂತ “ಸಹಕಾರ ಸಪ್ತಾಹ”ವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ನಿರ್ದೇಶನದಂತೆ ಬೆಳಕೆ ಗ್ರಾಮೀಣ ವ್ಯವಸಾಯ ಸಹಕಾರ ಸಂಘ (ನಿ.) ವತಿಯಿಂದ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಮಾದೇವ ನಾಯ್ಕ, ಉಪಾಧ್ಯಕ್ಷರಾದ ಶ್ರೀ ಪಾಂಡು ನಾಯ್ಕ, ನಿರ್ದೇಶಕರಾದ ಶ್ರೀ ಲಕ್ಷ್ಮೀನಾರಾಯಣ ನಾಯ್ಕ, ಶ್ರೀ ನಾಗೇಶ ನಾಯ್ಕ, ಶ್ರೀ ಮಂಜು ಮೊಗೇರ, ಶ್ರೀ ಭಾಸ್ಕರ ಗೊಂಡ, ಶ್ರೀ ರವಿರಾಜ್ ಜೈನ್, ಶ್ರೀಮತಿ ಲಲಿತಾ ನಾಯ್ಕ ಹಾಗೂ ಶ್ರೀಮತಿ ಶಾರದಾ ನಾಯ್ಕ ಭಾಗವಹಿಸಿ ಗಿಡಗಳನ್ನು ನೆಟ್ಟರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಅಣ್ಣಪ್ಪ ನಾಯ್ಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಸಹಕಾರ ಸಪ್ತಾಹದ ಅಂಗವಾಗಿ ಪರಿಸರ ಸಂರಕ್ಷಣೆ ಮತ್ತು ಹಸಿರು ವಾತಾವರಣ ನಿರ್ಮಾಣದ ಮಹತ್ವವನ್ನು ತಿಳಿಸಿದರು.
