ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್ಸ್ ಪುರುಷರ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ ನಲ್ಲಿ ಕುಂದಾಪುರದ ಹೆಸರಾಂತ ಪವರ್ ಲಿಪ್ಟರ್ ಡಾ.ಸತೀಶ್ ಖಾರ್ವಿ ಅವರಿಗೆ ಚಿನ್ನದ ಪದಕ
ಕುಂದಾಪುರ-ರಾಷ್ಟ್ರಮಟ್ಟದ ಮಾಸ್ಟರ್ಸ್ ಪುರುಷರು ಮತ್ತು ಮಹಿಳೆಯರು ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್-2025 ಆಗಸ್ಟ್ 02 ರಿಂದ 07 ರವರೆಗೆ ಕೇರಳದ ಕೋಝಿಕ್ಕೋಡ್‌ನ ಕೇರಳ ವಿ.ಕೆ. ಕೃಷ್ಣ ಮೆನನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಕುಂದಾಪುರದ ಹೆಸರಾಂತ ಪವರ ಲಿಪ್ಟರ್ ಸತೀಶ್ ಖಾರ್ವಿ ಅವರು 66 ಕೆಜಿ ವಿಭಾಗದ ಮಾಸ್ಟರ್ 1 ವಿಭಾಗದಲ್ಲಿ ಒಟ್ಟು 480 ಕೆಜಿ ಭಾರವನ್ನು ಎತ್ತಿ 1ಚಿನ್ನ 2 ಬೆಳ್ಳಿ ಪದಕ ಪಡೆದುಕೊಂಡಿರುತ್ತಾರೆ. ರಾಷ್ಟ್ರಮಟ್ಟದ ಡೆಡ್ ಲಿಫ್ಟ್ ಸ್ಪರ್ಧೆಯಲ್ಲಿ 222.5 ಬಾರವನ್ನು ಎತ್ತುವ ಮೂಲಕ 5ನೇ ರಾಷ್ಟ್ರೀಯ ನೂತನ ದಾಖಲೆ ಸ್ಥಾಪಿಸುತ್ತಾರೆ. ತನ್ನದೆ ದಾಖಲೆ ತಾನೇ 4ನೇ ಬಾರಿಗೆ ಮುರಿದ ಹೆಗ್ಗಳಿಕೆ ಡಾ.ಸತೀಶ್ ಖಾರ್ವಿ ಅವರಿಗೆ ಸಂದಿದೆ.ಇವರು ಅಂತರಾಷ್ಟ್ರೀಯ ಪವರ್ ಲಿಫ್ಟಿರ್ ಕ್ರೀಡಾಪಟು ಕುಂದಾಪುರ ನ್ಯೂ ಹರ್ಕ್ಯುಲೇಸ್ ಜಿಮ್ ನ ಮಾಲಕರು ಹಾಗೂ ಕುಂದಾಪುರ ತಾಲೂಕ ಘಟಕದ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾಗಿರುತ್ತಾರೆ. 2019 ನೇ ವರ್ಷದಲ್ಲಿ 210 ಕೆಜಿ, ಬಾರವನ್ನೆತ್ತಿ ದಾಖಲೆ, 2021 ನೇ ವರ್ಷದಲ್ಲಿ 217.5 ಕೆ.ಜಿ ಭಾರವನೆತ್ತಿ ದಾಖಲೆ, 2022 ನೇ ವರ್ಷದಲ್ಲಿ 220 ಕೆ.ಜಿ ಭಾರವನೆತ್ತಿ ದಾಖಲೆ, 2023 ನೇ ವರ್ಷದಲ್ಲಿ 221 ಕೆಜಿ ಭಾರವನೆತ್ತಿ ದಾಖಲು, 2025 ನೇ ವರ್ಷದಲ್ಲಿ 222.5 ಕೆ.ಜಿ ಭಾರವನೆತ್ತಿ ನೂತನ ದಾಖಲೆ ಸ್ಥಾಪಿಸಿರುತ್ತಾರೆ.