ಯುಟ್ಯೂಬರ್ ಸ್ವತಂತ್ರ ಪತ್ರಕರ್ತರ ಮೇಲೆ ಧರ್ಮಸ್ಥಳದಲ್ಲಿ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ, ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಾರವಾರ ದಲ್ಲಿ ವಿವಿಧ ಸಂಘಟನೆಗಳಿಂದ ಮುಖ್ಯಮಂತ್ರಿ ಗೆ ಮನವಿ
ಕಾರವಾರ-ಯುಟ್ಯೂಬರ್ ಸ್ವತಂತ್ರ ಪತ್ರಕರ್ತರ ಮೇಲೆ ಧರ್ಮಸ್ಥಳದಲ್ಲಿ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಾರವಾರ ದಲ್ಲಿ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳಿಂದ ಜಂಟಿಯಾಗಿ ಪ್ರತಿಭಟನಾ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳನ್ನು ಪ್ರತಿನಿಧಿಸಿ ಯಮುನಾ ಗಾಂವ್ಕರ್, ರಾಮಾ ನಾಯ್ಕ, ಮಾಧವ ನಾಯ್ಕ, ಶ್ಯಾಮನಾಥ ನಾಯ್ಕ, ಫೂಲರ್ ಫರ್ನಾಂಡೀಸ್, ವಿಲ್ಸನ್, ವೀರೇಶ್ ರಾಠೋಡ್, ಸೂರಜ್ ಕೂರ್ಮಕರ್, ಶೇಕಪ್ಪ, ಪ್ರದ್ಯುಮ್ನ, ಶಶಿಧರ ಕೆ, ರೊಯೆನ್ ಫರ್ನಾಂಡೀಸ್ ವಿಘ್ನೇಶ್ ಬೋವಿ, ಅಜೀಜ್ ಮಾಂಡ್ಲಿಕ್ ಮುಂತಾದವರು ಹಾಜರಿದ್ದರು.