ಭಟ್ಕಳ: ತಾಲೂಕಿನ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಶನಿವಾರ ಶಾರದಾ ಪೂಜೆಯನ್ನು ಧಾರ್ಮಿಕ ಉತ್ಸಾಹದಿಂದ ಆಚರಿಸಲಾಯಿತು. ಪ್ರತಿವರ್ಷದಂತೆ ಈ ಬಾರಿ ಕೂಡ ವಿದ್ಯಾರ್ಥಿನಿಯರು, ಶಿಕ್ಷಕರು ಹಾಗೂ ಪಾಲಕರು ಸೇರಿದಂತೆ ಎಲ್ಲರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ದಿನನಿತ್ಯ ಪಾಠಗಳ ಗಂಭೀರ ವಾತಾವರಣದಲ್ಲಿದ್ದ ವಿದ್ಯಾರ್ಥಿನಿಯರು ಈ ದಿನ ಭಜನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಹಬ್ಬದ ಸಂಭ್ರಮವನ್ನು ಅನುಭವಿಸಿದರು.
ಅರ್ಚಕರಾದ ರಾಮಕೃಷ್ಣ ಭಟ್ ಅವರು ಶಾರದಾ ದೇವಿಗೆ ಪೂಜೆ ಸಲ್ಲಿಸಿ, ವಿದ್ಯಾರ್ಥಿನಿಯರು ಮುಂದಿನ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ವಿಯಾಗಿ ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಲಿ ಹಾಗೂ ಶಾಲೆಗೂ, ಪೋಷಕರಿಗೂ ಗೌರವ ತಂದುಕೊಡಲಿ ಎಂದು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ದೇವಿದಾಸ್ ನಾಯ್ಕ, ಉಪಾಧ್ಯಕ್ಷೆ ಮಮತಾ ದೇವಾಡಿಗ, ಸದಸ್ಯರಾದ ಅಶೋಕ್ ಶಾನ್ ಬಾಗ್, ಸುರೇಂದ್ರ ಭಟ್ಕರ್, ಸುರೇಶ್ ಆಚಾರಿ, ಶಿಕ್ಷಕರಾದ ಪಿ. ಎ. ಗೋಮ್ಸ್, ಮಹಾಲಕ್ಷ್ಮಿ ಪಟಗಾರ, ಭಗೀರಥ ನಾಯ್ಕ, ಪ್ರತಿಮಾ ಮ್ಯಾಡಂ, ಜ್ಯೋತಿ ಟೀಚರ್, ನ್ಯಾಯವಾದಿ ಉದಯ ನಾಯ್ಕ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

