ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಂಕಿತ ಉಗ್ರ ಶಾರೀಕ್ ಗೆ ಬೆಂಗಳೂರಿನಲ್ಲಿ ಇದ್ದಳಂತೆ ಗರ್ಲ್ ಫ್ರೆಂಡ್
ಮಂಗಳೂರು-ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಂಕಿತ ಉಗ್ರ ಶಾರೀಕ್ ಗೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೀಗ ಪ್ರಕರಣ ಎನ್ಐಎಗೆ ವರ್ಗಾಯಿಸಲಾಗಿದೆ.ಈ ಮಧ್ಯೆ ಶಂಕಿತ ಉಗ್ರ ಶಾರೀಕ್ ನ ವಾಟ್ಸಪ್ ಪರಿಶೀಲನೆ ನಡೆಸಿದಾಗ ಆತನಿಗೆ ಬೆಂಗಳೂರಿನಲ್ಲಿ ಗರ್ಲ್ಫ್ರೆಂಡ್ ಇರುವ ವಿಷಯ ಬೆಳಕಿಗೆ ಬಂದಿದೆ.
ಶಂಕಿತ ಉಗ್ರ ಶಾರೀಕ್ ಜೊತೆ ಈ ಯುವತಿ ವಾಟ್ಸಪ್ನಲ್ಲಿ ಸಂಪರ್ಕದಲ್ಲಿದ್ದ ಎಂಬ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಅಮೃತಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಯುವತಿ ವಾಸವಾಗಿದ್ದಾಳೆ. ಬೆಂಗಳೂರಿಗೆ ಬಂದಾಗ ಶಂಕಿತ ಉಗ್ರ ಶಾರೀಕ್ ಯುವತಿ ಜೊತೆ ಸುತ್ತಾಡುತ್ತಿದ್ದನು. ಶಾಪಿಂಗ್ ಗೆ ಇಬ್ಬರು ಹೋಗುತ್ತಿದ್ದರು ಎನ್ನುವುದು ತಿಳಿದು ಬಂದಿದೆ.
ಬೆಂಗಳೂರಿಗೆ ಹೋದ ಪ್ರತಿಬಾರಿಯೂ ಶಂಕಿತ ಉಗ್ರ ಶಾರೀಕ್ ಯುವತಿಯನ್ನು ಭೇಟಿಯಾಗುತ್ತಿದ್ದನು. ಈ ಹಿನ್ನೆಲೆ ತನಿಖಾ ತಂಡಗಳು ಯುವತಿಯನ್ನು ವಿಚಾರಣೆಗೆ ಒಳಪಡಿಸಿವೆ ಎಂದು ಹೇಳಲಾಗುತ್ತಿದೆ.
ವಿಚಾರಣೆ ವೇಳೆ ಸ್ಪೋಟದಲ್ಲಿ ಯುವತಿಯ ಪಾತ್ರ ಇಲ್ಲ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಯುವತಿಯನ್ನು ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರಿನಲ್ಲಿ ಕಳೆದ ವಾರ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಇದೀಗ ತನಿಖೆ ಚುರುಕುಗೊಂಡಿದೆ.ತನಿಖೆಯ ಭಾಗವಾಗಿ ಪೊಲೀಸರು ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವುದು ತಿಳಿದು ಬಂದಿದೆ.