ಆಶ್ರಯ ನೀಡಿದ್ದ ಹಿಂದೂ ಮನೆಮಾಲೀಕನ ಮಗಳನ್ನೇ ಪಟಾಯಿಸಿಕೊಂಡು ಓಡಿ ಹೋದ ಮುಸ್ಲಿಂ ಯುವಕ
*ರಾಯಚೂರು-ರಾಯಚೂರು ಜಿಲ್ಲೆಯಲ್ಲಿ ಮತ್ತೊಂದು ಲವ್‌ಕೇಸ್ ನಡೆದಿದೆ ಎನ್ನಲಾಗಿದ್ದು, ಅಶ್ರಯ ನೀಡಿದ್ದ ಮನೆಮಾಲೀಕರ ಮಗಳನ್ನೇ ಮುಸ್ಲಿಂ ಹುಡುಗನೊಬ್ಬ ಪಟಾಯಿಸಿಕೊಂಡು ಮದುವೆಯಾಗಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
*ರಾಯಚೂರಿನ ರೆಹಾನ್ ಎನ್ನುವವನ ವಿರುದ್ದ ಲವ್‌ಜಿಹಾದ್ ಆರೋಪ ಕೇಳಿ ಬಂದಿದ್ದು, ಲಾಕ್ ಡೌನ್‌ವೇಳೆಯಲ್ಲಿ ರೆಹಾನ್ ಕುಟುಂಬವವರು ಹಿಂದೂ ಕುಟುಂಬದವರ ಮನೆಯಲ್ಲಿ ಅಶ್ರಯಪಡೆದುಕೊಂಡಿದ್ದ ಎನ್ನಲಾಗಿದೆ.*
*ಈ ವೇಳೆಯಲ್ಲಿ ಮನೆ ಮಾಲೀಕರ ಯುವತಿಯನ್ನು ತಂಗಿ ತಂಗಿ ಎನ್ನುತ್ತಿದ್ದನಂತೆ. ಇನ್ನೂ ಇಬ್ಬರ ನಡುವೆ ಲವ್ ಆಗಿದ್ದು, ಯುವತಿ ರೆಹಾನ್ ಜೊತೆಗೆ ಓಡಿ ಹೋಗಿದ್ದು, ಸದ್ಯ ಆಕೆ ಹೊರ ರಾಜ್ಯದಲ್ಲಿ ಹನಿಮೂನ್ ಮುಗಿಸಿಕೊಂಡು ಬಂದಿದ್ದಾಳೆ. ಈ ವೇಳೆ ಪ್ರಕರಣ ಸಂಬಂಧ ತನಿಖೆ ಪೋಲಿಸ್‌ನವರ ಮುಂದೆಯೇ ಯುವತಿ ತನ್ನ ಹೆತ್ತವರಿಗೆ ಬೈದಿದ್ದಾಳೆ ಎನ್ನಲಾಗಿದೆ. ಇದಲ್ಲದೇ ಯುವತಿಗೆ ಬೇರೆಯವರ ಜೊತೆಗೆ ಎಂಗ್‌ಯೇಜ್‌ಮೆಂಟ್ ಕೂಡ ಆಗಿತ್ತು ಎನ್ನಲಾಗಿದೆ.*
*ಮಗಳ ಈ ಸ್ಥಿತಿಗೆ ಮುಸ್ಲಿಂ ಯುವಕ ರೆಹಾನ್ ಕಾರಣ. ಆತ ನಮ್ಮ ಮಗಳ ಮನಸನ್ನು ಸಂಪೂರ್ಣವಾಗಿ ಕೆಡಿಸಿದ್ದಾನೆ ಎಂದು ಆಕೆಯ ತಾಯಿ ನಾಗಮ್ಮ ಅಳಲು ತೋಡಿಕೊಂಡಿದ್ದಾರೆ. ಆಕೆಗೆ ಮತ್ತೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವೂ ಆಗಿತ್ತು. ಇನ್ನೊಂದು ತಿಂಗಳಲ್ಲಿ ಮದುವೆ ನಡೆಯುವುದಿತ್ತು. ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೆವು. ಮದುವೆಗೆ ಬೇಕಾದ ವಸ್ತುಗಳನ್ನೆಲ್ಲ ತಂದಿಟ್ಟುಕೊಂಡಿದ್ದೆವು. ಈಗ ನೋಡಿದರೆ ಆ ಮುಸ್ಲಿಂ ಹುಡುಗ ಹೀಗೆ ಮಾಡಿದ್ದಾನೆ. ನನ್ನ ಪುತ್ರಿಗೆ ಬುರ್ಖಾ ಹಾಕಿಸಲಾಗಿದೆ. ನಮಗೆ ಬುರ್ಖಾ ಬೇಕಿಲ್ಲ, ಆ ಯುವಕ ರೆಹಾನ್ ಕೂಡ ಬೇಕಾಗಿಲ್ಲ. ನಮಗೆ ನನ್ನ ಮಗಳು ಬೇಕು’ ಎಂದು ಗೋಳಾಡಿದ್ದಾರೆ.*