ಭೀಕರ ಅಪಘಾತದಲ್ಲಿ ಛಾಯಾಚಿತ್ರಗ್ರಾಹಕ ಸಾವು
ಕುಮಟಾ -ಕಾರವಾರದಲ್ಲಿ ನಡೆದ ಅಪಘಾತ ಒಂದರಲ್ಲಿ ಕುಮಟಾದ ಛಾಯಾಚಿತ್ರಗ್ರಾಹಕನೊಬ್ಬ ಕೊನೆ ಉಸಿರೆಳೆದ ಮೃತಪಟ್ಟ ಬಗ್ಗೆ ವರದಿಯಾಗಿದೆ. ತಾಲೂಕಿನ ಅಮದಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಬೈಕ್ ಮತ್ತು ಟೆಂಪೋ ನಡುವಿನ ಅಪಘಾತದಲ್ಲಿ, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಬೈಕ್ನಲ್ಲಿ ಸಾಗುತ್ತಿದ್ದ ಮಹಾಬಲೇಶ್ವರ ತಿರುವಿನಲ್ಲಿ ಬೈಕ್ ತಿರುಗಿಸುವಾಗ ದುರ್ಘಟನೆ ನಡೆದಿದೆ. ಕುಮಟಾದಲ್ಲಿ ಫೊಟೊಗ್ರಾಫರ್ ಆಗಿರುವ ಮಹಾಬಲೇಶ್ವರ ಅಂಬಿಗ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಬೈಕ್ನ ಹಿಂದೆ ಬರುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣಕ್ಕೆ ಸಿಗದೆ ಮುಂದೆ ಮಹಾಬಲೇಶ್ವರ ಅವರ ಬೈಕ್ಗೆ ಡಿಕ್ಕಿಯಾದ ರಭಸಕ್ಕೆ ಬೈಕ್ನಲ್ಲಿದ್ದ ಮಹಾಬಲೇಶ್ವರ ಸಿನಿಮಿಯ ರೀತಿಯಲ್ಲಿ ಬೈಕ್ ಸಮೇತ ಹಾರಿ ಎದುರು ಚಲಿಸುತ್ತಿದ್ದ ಕಾರಿಗೆ ಬಡಿದು ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮಹಾಬಲೇಶ್ವರ, ಕ್ರಿಮ್ಸ್ ಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.