ಬೆಳಗಾಂವ ಚಳಿಗಾಲದ ಅಧಿವೇಶನ;
ಸರಕಾರ ಅರಣ್ಯವಾಸಿಗಳ ಪರ ಬದ್ಧತೆ ಪ್ರಕಟಿಸಲಿ- ರವೀಂದ್ರ ನಾಯ್ಕ.
ಭಟ್ಕಳ: ಸ್ವತಂತ್ರ ಭಾರತದ ನಂತರದ ಸಾಮಾಜಿಕ ಸಮಸ್ಯೆಗಳಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದಿದ್ದಾಗಿಯೂ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಬೆಳಗಾಂವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರಕಾರವು ಅರಣ್ಯವಾಸಿಗಳ ಪರ ಬದ್ಧತೆ ಪ್ರಕಟಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ಇಂದು ಶಿರಸಿಯಲ್ಲಿ ಡಿ. ೧೭ ರಂದು ಸಂಘಟಿಸಲಾದ ಅರಣ್ಯವಾಸಿಗಳನ್ನ ಉಳಿಸಿ ಜಾಥದ ಸಂಬAಧ ಭಟ್ಕಳ ಅರಣ್ಯ ಅತಿಕ್ರಮಣದಾರರನ್ನ ಭೇಟಿಯ ನಂತರ ಮೇಲಿನಂತೆ ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವೈಫಲ್ಯ ಹಾಗೂ ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿಗಳನ್ನ ವಿಲೇವಾರಿ ಮಾಡಿರುವುದರಿಂದ ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗುತ್ತಿರುವುದು ವಿಷಾದಕರ. ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಸರಕಾರ ಗಂಭೀರವಾಗಿ ಚಿಂತಿಸಬೇಕು. ಇಲ್ಲದಿದ್ದಲ್ಲಿ ಸುಫ್ರೀಂ ಕೋರ್ಟನ ಆದೇಶದಂತೆ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಲಾಗುವ ಪ್ರಸಂಗ ಬಂದೊದಗಬಹುದೆAಬ ಆತಂಕವನ್ನು ಅವರು ವ್ಯಕ್ತಪಡಿಸಿದರು.
ಶಿರಸಿಗೆ ಸಹಸ್ರಾರು ಅತಿಕ್ರಮಣದಾರರು:
ಡಿ. ೧೭ ರಂದು ಶಿರಸಿಯಲ್ಲಿ ಜರುಗುವ ಅರಣ್ಯವಾಸಿಗಳನ್ನ ಉಳಿಸಿ ರ್ಯಾಲಿಗೆ ಭಟ್ಕಳ ತಾಲೂಕಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಅರಣ್ಯ ಅತಿಕ್ರಮಣದಾರರು ಭಾಗವಹಿಸುವ ಕುರಿತು ಚರ್ಚೆಯ ಸಂದರ್ಭದಲ್ಲಿ ತೀರ್ಮಾನಿಸಲಾಯಿತು ಎಂದು ರವೀಂದ್ರ ನಾಯ್ಕ ತಿಳಿಸಿದರು.
ಸಭೆಯಲ್ಲಿ ಸ್ವಾಗತ ಮತ್ತು ಪ್ರಾಸ್ತವಿಕವನ್ನ ಜಿಲ್ಲಾ ಸಂಚಾಲಕ ದೇವರಾಜ ಗೊಂಡ ಮಾಡಿದರು, ಸಂಘಟನೆಯನ್ನು ಉದ್ದೇಶಿಸಿ ತಂಜೀಮ್ ಅಧ್ಯಕ್ಷ ಇನಾಯತ್ ಸಾಬಂದ್ರಿ ಮಾತನಾಡಿದರು. ಸಭೆಯಲ್ಲಿ ಗೋಮ ಮರಾಠಿ, ರಿಜವಾನ್, ಕಹೀಂ ಸಾಬ, ಸಂಚಾಲಕರಾದ ಪಾಂಡುರAಗ ನಾಯ್ಕ ಬೆಳಕೆ, ಮಂಜುನಾಥ ನಾಯ್ಕ ಹಾಡುವಳ್ಳಿ, ಶ್ಯಾಮಲಾ ಕುಂಟವಾಣಿ, ಫರಿದಾ ಜಾಲಿ, ನಾಗರಾಜ, ದಿವ್ಯಾ ಕರಿಕಲ್, ಮಾದೇವಿ ಕರಿಕಲ್ ಮುಂತಾದವರು ಉಪಸ್ಥಿತರಿದ್ದರು.