ನೀರು ತುಂಬಿಸಿಟ್ಟಿದ್ದ ಬಕೆಟ್ ನಲ್ಲಿ ಬಿದ್ದು ಮುಳುಗಿ 10 ತಿಂಗಳ ಮಗು ಸಾವು
ದಾವಣಗೆರೆ- ನೀರು ತುಂಬಿಸಿಟ್ಟಿದ್ದ ಬಕೆಟ್ ಗೆ ಬಿದ್ದು 10 ತಿಂಗಳ ಮಗು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.
ಅನುಶ್ರಾವ್ಯ(10 ತಿಂಗಳು) ಮೃತಪಟ್ಟ ಮಗುವಾಗಿದ್ದು, ಮನೆಯ ಮುಂಭಾಗದಲ್ಲಿ ಮಗು ಎಂದಿನಂತೆಯೇ ಆಟವಾಡುತ್ತಿತ್ತು. ಈ ವೇಳೆ ನೀರು ತುಂಬಿದ ಬಕೆಟ್ ಗೆ ಮಗು ಬಿದ್ದಿದ್ದು, ಮಗುವಿನ ಪೋಷಕರು ಇದನ್ನು ತಡವಾಗಿ ಗಮನಿಸಿದ್ದಾರೆ ಎನ್ನಲಾಗಿದೆ.
ಮಗು ಬಕೆಟ್ ಗೆ ಬಿದ್ದಿರುವುದನ್ನು ಕಂಡ ತಕ್ಷಣವೇ ಮಗುವನ್ನು ಜಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆದರೆ, ಮಾರ್ಗ ಮಧ್ಯೆ ಮಗು ಕೊನೆಯುಸಿರೆಳೆದಿದೆ ಎಂದು ತಿಳಿದು ಬಂದಿದೆ.
ಗ್ರಾಮದ ಮಂಜುನಾಥ್ ಹಾಗೂ ತಾರಾ ದಂಪತಿಯ ಮಗುವಾಗಿರುವ ಅನುಶ್ರಾವ್ಯ ಮೃತಪಟ್ಟ ಮಗುವಾಗಿದ್ದು, ಇದೀಗ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.