ಮೀನು ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ – ಬೈಕ ಸವಾರಿಬ್ಬರು ಸಾವು
ಭಟ್ಕಳ- ಮೀನು ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಸಾವನ್ನಪ್ಲಿರುವ ಘಟನೆ ಮುಟ್ಟಳ್ಳಿ ಬೈಪಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ಬೈಕ್ ಸವಾರರನ್ನು ಲೋಕೇಶ ನಾಯ್ಕ, ಶೇಖರ ನಾಯ್ಕ ಎಂದು ಗುರುತಿಸಲಾಗಿದೆ. ಹೊನ್ನಾವರ ಮೂಲದ ಮೀನು ಲಾರಿ ಚಾಲಕ
ರವಿ ಸುಂದರ ಭೋವಿ ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಅತ್ತಿ ವೇಗ ಹಾಗೂ ನಿರ್ಲಕ್ಷಿತನದಿಂದ ಚಲಾಯಿಸಿಕೊಂಡು ಬಂದು ಭಟ್ಕಳ ಕಡೆಗೆ ಹೋಗುತ್ತಿದ್ದ ಶೇಖರ ನಾಯ್ಕನ ಬೈಕ್ ಗೆ
ಡಿಕ್ಕಿ ಹೊಡೆದು ತನ್ನ ಮೀನು ಲಾರಿಯ ಮೇಲೆ ನಿಯಂತ್ರಣ ತಪ್ಪಿ ಲಾರಿಯನ್ನು ರಸ್ತೆಯ ಮೇಲೆ ಪಲ್ಟಿ ಮಾಡಿ ಅಪಘಾತ ಪಡಿಸಿದರಿಂದ ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಈ ಕುರಿತು ಮೀನು ಲಾರಿ ಚಾಲಕ ರವಿ ಸುಂದರ ಭೋವಿ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.