ಜನವರಿ 1 ಮತ್ತು 2 ರಂದು ಭಟ್ಕಳದ ಅಂಜುಮನ್ ಶಿಕ್ಷಣ ಸಂಸ್ಥೆಯಿಂದ ಶತಮಾನೋತ್ಸವ ದ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಣೆ
ಭಟ್ಕಳ – 1919 ರಿಂದ ಪ್ರಾಥಮಿಕ ಶಿಕ್ಷಣದಿಂದ ಆರಂಭವಾದ ಶಿಕ಼್ಣ ಸಂಸ್ಥೆ 2019 ರಲ್ಲಿ ಶತಮಾನೋತ್ಸವ ದ ಆಚರಣೆ ನಡೆಸಿತ್ತು ಕರೋನಾ ಕಾರಣದಿಂದಾಗಿ 2 ವರ್ಷದ ವರೆಗೆ ಸಮಾರೋಪ ಸಮಾರಂಭ ನಡೆಸಲಾಗುತ್ತಿದೆ. ದಿನಾಂಕ 1 ತ್ತು 2 ಜನವರಿ 2023 ರಂದು ಅಂಜುಮನ್ ಗ್ರಾಂಡ್ ನಲ್ಲಿ ನಡೆಯಲಿದೆ.
ಬೆಳಗ್ಗೆ ವೇದಿಕೆಯಲ್ಲಿ ಸಭಾ ಕಾರ್ಯಕ್ರಮಗಳು ನಡೆದು ಸಂಜೆ ಮಹಿಳೆಯರಿಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂಧ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮ ನಡೆಯಲಿದೆ . ಸಭಾ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿರರಾಗಿ ಸುಪ್ರಿಂಕೋರ್ಟನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು, ಚುಣಾವಣಾ ಆಯೋಗದ ನಿವೃತ್ತ ಅಧಿಕಾರಿ ಎಸ್ ವೈ ಖುರೆಷಿ, ಕಾಂಗ್ರೆಸ್‌ನ ಮುಖಂಡ ಬಿಕೆ ಹರಿಪ್ರಸಾದ, ಭಟ್ಕಳ ಶಾಸಕ ಸುನಿಲ್ ನಾಯ್ಕ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಸೇರಿದಂತೆ ಇನ್ನಿತರೇ ಗಣ್ಯರು ಸಹಭಾಗಿಯಾಗಲಿದ್ದಾರೆ ಎಂದು ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ ಮುಜಾಮಿಲ್ ತಿಳಿಸಿದರು .
ಈ ಸಂಧರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಇಸ್ಮಾಯಿಲ್ ಸಿದ್ದಿಕಿ, ಶತಮಾನೋತ್ಸವ ಸಮಾರೋಪ ಸಮಾರಂಭದ ಕನ್ವಿನಿಯರ್ ಮಹಮ್ಮದ ತನವೀರ್ ಕಾಸರಕೊಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.