ವನ್ಯಜೀವಿ ಅಭಯಾರಣ್ಯದಿಂದ ಮೂಲಭೂತ ಹಕ್ಕಿನಿಂದ ವಂಚಿತ;
ಜ.೧೫ ರಂದು ಮುಖ್ಯಮಂತ್ರಿಗಳ ಮೇಲೆ ಸಭಾಧ್ಯಕ್ಷರು ಒತ್ತಡ ತರಲಿ- ರವೀಂದ್ರ ನಾಯ್ಕ.
ಸಿದ್ಧಾಪುರ: ರಾಜ್ಯ ಸರ್ಕಾರವು ಶಿವಮೊಗ್ಗ ಶರಾವತಿ ವನ್ಯಜೀವಿ ಅಭಯಾರಣ್ಯಕ್ಕೆ ಹೇಚ್ಚುವರಿ ಅರಣ್ಯ ಪ್ರದೇಶ ಸೇರಿಸಿರುವುದರಿಂದ ವನ್ಯಜೀವಿ ಅಭಯಾರಣ್ಯ ಮೀತಿಗೊಳಿಸಿ ಸಭಾಧ್ಯಕ್ಷರು ಮುಖ್ಯಮಂತ್ರಿಗೆ ಒತ್ತಾಯಿಸಲು ಅಗ್ರಹ.
ಅಭಯಾರಣ್ಯ ವ್ಯಾಪ್ತಿಯಲ್ಲಿ ಜೀವಿಸುತ್ತಿರುವ ಕುಟುಂಬಗಳು ಜೀವನದ ಮೂಲಭೂತ ಹಕ್ಕಿನಿಂದ ವಂಚಿತರಾಗುವುದರಿAದ ಅಭಯಾರಣ್ಯದ ವ್ಯಾಪ್ತಿಯನ್ನ ಸೀಮಿತಗೊಳಿ ಕಾರ್ಯ ನಿರ್ವಹಿಸುವಂತೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜನವರಿ ೧೫ ರಂದು ಶಿರಸಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ್ ಬೋಮ್ಮಾಯಿ ಅವರ ಮೇಲೆ ಒತ್ತಡ ತರಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಗ್ರಹಿಸಿದ್ದಾರೆ.
ರಾಜ್ಯ ಸರಕಾರವು ಶಿವಮೊಗ್ಗ ಶರಾವತಿ ವನ್ಯಜೀವಿ ಅಭಯಾರಣ್ಯಕ್ಕೆ ಹೇಚ್ಚುವರಿ ಉತ್ತರ ಕನ್ನಡದ ಶಿರಸಿ, ಭಟ್ಕಳ, ಸಿದ್ಧಾಪುರ, ಕುಮಟ ಮತ್ತು ಹೊನ್ನಾವರ ತಾಲೂಕುಗಳ ಸುಮಾರು ೪೪,೦೦೦ ಹೇಕ್ಟರ್ ಪ್ರದೇಶವು ಸೇರ್ಪಡೆಗೊಂಡಿರುವುದರಿAದ ಸುಮಾರು ೯೦ ಹಳ್ಳಿಗಳ ೧೬,೦೦೦ ಕುಟುಂಬಗಳು ಮೂಲಭೂತ ಹಕ್ಕಿನಿಂದ ವಂಚಿತವಾಗದ ರೀತಿಯಲ್ಲಿ ಮುಖ್ಯಮಂತ್ರಿಗಳು ಕ್ರಮ ಜರುಗಿಸುವಂತೆ ಸಭಾಧ್ಯಕ್ಷರು ಕ್ರಮ ಜರುಗಿಸಬೇಕೆಂದು ಅವರು ಹೇಳಿದರು.
ತಲತಲಾಂತರದಿAದ ಕಂದಾಯ ಮತ್ತು ಅರಣ್ಯವಾಸಿಗಳು ಸಂಪೂರ್ಣ ಜನಜೀವನವನ್ನ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅಭಯಾರಣ್ಯದ ನೀತಿ ನಿಯಮದಿಂದ ಮಾನವ ಜೀವನ ನಿಯಂತ್ರಿಸಲ್ಪಡುವುದರಿAದ ಸಭಾಧ್ಯಕ್ಷರು ಹೇಚ್ಚಿನ ಆಸಕ್ತಿಯನ್ನು ವಹಿಸಿ ಮುಖ್ಯಮಂತ್ರಿ ಗಮನಕ್ಕೆ ತರಬೇಕೆಂದು ಅವರು ಹೇಳಿದರು.
ಅಧಿಸೂಚನೆ ಸಮರ್ಪಕವಲ್ಲ:
ಹೆಚ್ಚುವರಿ ವನ್ಯಜೀವಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶವನ್ನ ಸೇರ್ಪಡೆಗೊಳಿಸಿರುವುದು ಕಾನೂನಿನ ವಿಧಿ-ವಿಧಾನ ಅನುಸರಿಸದೇ, ಜನಾಭಿಪ್ರಾಯ ಮತ್ತು ಜನಜಾಗೃತಿ ಮೂಡಿಸದೇ, ಅಭಯಾರಣ್ಯದ ಪ್ರದೇಶದಲ್ಲಿರುವ ಕಂದಾಯ ಭೂಮಿ ಸಾಗುವಳಿದಾರರಿಗೆ ಭದ್ರತೆ ನೀಡದೆ ಜ್ಯಾರಿ ಮಾಡಿರುವ ಅಧಿಸೂಚನೆ ಸಮರ್ಪಕವಾದದ್ದಲ್ಲ ಎಂದು ರವೀಂದ್ರ ನಾಯ್ಕ ಹೇಳಿದರು.