ಡೆಲ್ಲಿ ಮದ್ಯದ ಹಗರಣ E.D ಚಾರ್ಜ್ ಶೀಟ್ ನಲ್ಲಿ ಕೇಜ್ರಿವಾಲ್ ಹೆಸರು- E.D ಬಿಜೆಪಿಯ ಆದೇಶದಂತೆ ಕೆಲಸ ಮಾಡುತ್ತಿದೆ ಕೆಜ್ರಿವಾಲ್ ಆರೋಪ
ನವದೆಹಲಿ-ದೆಹಲಿ ಮದ್ಯದ ಹಗರಣದಲ್ಲಿ ಇಡಿ ತನ್ನ ಎರಡನೇ ಚಾರ್ಜ್ ಶೀಟ್ನಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ವೈಸಿಪಿ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಮತ್ತು ಇತರೆ 17 ಮಂದಿ ಆರೋಪಿಗಳ ಹೆಸರುಗಳನ್ನು ದಾಖಲಿಸಿದೆ. ಇಡೀ ಪ್ರಕರಣದಲ್ಲಿ ವಿಜಯ್ ನಾಯರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇಡಿ ಬಹಿರಂಗಪಡಿಸಿದೆ.
ಮದ್ಯ ಹಗರಣದಿಂದ ಬಂದ ಹಣವನ್ನು ಎಎಪಿ ಕಳೆದ ವರ್ಷ ಗೋವಾದಲ್ಲಿ ನಡೆದ ಚುನಾವಣೆ ಸಮಯದಲ್ಲಿ ಬಳಸಿಕೊಂಡಿದೆ ಎಂದು ಇಡಿ ಹೇಳಿಕೆ ನೀಡಿದೆ. ಎಎಪಿ ಪರವಾಗಿ ಸಮೀಕ್ಷೆ ನಡೆಸಿದವರಿಗೆ 70 ಲಕ್ಷ ಪಾವತಿಸಲಾಗಿದೆ ಎಂದು ಇಡಿ ಚಾರ್ಜ್ ಶೀಟ್ನಲ್ಲಿ ತಿಳಿಸಿದೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಹಾಯಕ ದಿನೇಶ್ ಅರೋರಾ ಮತ್ತು ಹೈದರಾಬಾದ್ ಮೂಲದ ಉದ್ಯಮಿ ಅಭಿಷೇಕ್ ಹಣ ವರ್ಗಾವಣೆಗೆ ಸಹಾಯ ಮಾಡಿದ್ದಾರೆ ಎಂದು ಇಡಿ ಹೇಳಿದೆ.
ಇದೇ ವೇಳೆ ಇಡಿ ಚಾರ್ಜ್ ಶೀಟ್ ವಿರುದ್ಧ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ. ಇಡಿ ಬಿಜೆಪಿಯ ಆದೇಶದಂತೆ ಕೆಲಸ ಮಾಡುತ್ತಿದೆ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಬದಲು ಸರ್ಕಾರಗಳನ್ನು ಉರುಳಿಸಲು ಇಡಿ ಕೆಲಸ ಮಾಡುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.