ಕೌಟುಂಬಿಕ ಕಲಹದಿಂದ ಬೇಸತ್ತು ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಟೀಚರ್
ವಿಜಯನಗರ-ವಿಜಯನಗರ ಜಿಲ್ಲೆಯ ಹಡಗಲಿಯ ನ್ಯಾಷನಲ್ ಶಾಲೆಯಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತು ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಶಿಕ್ಷಕಿ ಬಸ್ಸಮ್ಮ ( 34) ಎಂಬುವವರು ಶಾಲಾ ಕೊಠಡಿಯಲ್ಲಿ ವಿಷ (Poison) ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹತ್ತು ವರ್ಷಗಳ ಹಿಂದೆ ಅರ್ಜುನ್ ಎಂಬಾತನೊಂದಿಗೆ ಬಸ್ಸಮ್ಮ ಪ್ರೀತಿಸಿ ಮದುವೆಯಾಗಿದ್ದಳು. ವರದಕ್ಷಿಣೆ ಕಿರುಕುಳದಿಂದ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಇದೇ ವಿಚಾರವಾಗಿ ಗಂಡ ಅರ್ಜುನ್, ಅತ್ತೆ ಅಂಬಿಕಾ, ನಾದಿನಿ ಸಂಗೀತಾ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ನ್ಯಾಷನಲ್ ಶಾಲೆ ಅರ್ಜುನ್ ಕುಟುಂಬದ ಒಡೆತನಕ್ಕೆ ಸೇರಿದ ಶಾಲೆಯಾಗಿದೆ. ಪರೀಕ್ಷೆ ಕೆಲಸದ ನೆಪದಲ್ಲಿ ಶಾಲೆಗೆ ಬಂದು ಬಸ್ಸಮ್ಮ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಕೆ ಆತ್ಮಹತ್ಯೆಗೂ ಮುನ್ನ ಸೂಸೈಡ್ ಲೆಟರ್ ಬರೆದಿಟ್ಟಿದ್ದಾರೆ.