*ಕನ್ನಡ ಸೇನಾನಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ರಣಧೀರರ ವೇದಿಕೆಯಿಂದ ಮುಖ್ಯಮಂತ್ರಿಗಳಿಗೆ ಮನವಿ..*
ಬೆಂಗಳೂರು : ಕನ್ನಡ ಸೇನಾನಿ ಕನ್ನಡ ಪರ ಚಿಂತಕ ನಾಡ ಹೋರಾಟಗಾರ ಕನ್ನಡ ಚಳುವಳಿಯ ಭೀಷ್ಮ ಎಂದು ರಾಜ್ಯದ ಕನ್ನಡ ಪ್ರೇಮಿಗಳು ಕರೆಯುವ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌ ರವರನ್ನು ರಾಜ್ಯ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದು ಖಂಡನೀಯವೆಂದು ಕರ್ನಾಟಕ ರಣಧೀರರ ವೇದಿಕೆಯು ನೆಲಮಂಗಲ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ..
ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳು ಕಟ್ಟಡಗಳು ಹಾಗೂ ಇನ್ನಿತರೆ ವ್ಯಾಪಾರ ಸ್ಥಳಗಳಲ್ಲಿ ಶೇಕಡಾ 60% ರಷ್ಟು ಕನ್ನಡ ಭಾಷೆಯನ್ನು ಬಳಸಬೇಕೆಂದು ಶೇಕಡಾ 40% ರಷ್ಟು ಇಂಗ್ಲೀಷ್ ಆಂಗ್ಲ ಭಾಷೆಯನ್ನು ಬಳಸಬೇಕೆಂದು ಸ್ಥಳೀಯ ಪ್ರಾಧಿಕಾರದ ಹಾಗೂ ಬಿ.ಬಿ.ಎಂ.ಪಿ ಮತ್ತು ಸರ್ಕಾರದ ಆದೇಶಗಳಿದ್ದರೂ ಸಹ ಸದರಿ ಆದೇಶಗಳನ್ನು ಉಲ್ಲಂಘನೆ ಮಾಡಿ ಹಿಂದಿ ತೆಲುಗು ತಮಿಳು ಮಲಯಾಳಿ ಸೇರಿದಂತೆ ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ನಾಮಫಲಕಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ ಇದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಪರ ಸಂಘಟನೆಗಳು 27 ರಂದು ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಕನ್ನಡ ಸೇನಾಧಿಗಳನ್ನೂ ಮತ್ತು ಟಿ.ಎ.ನಾರಾಯಣ್ ಗೌಡರನ್ನು ಬಂಧಿಸಿ ಜೈಲಿಗಟ್ಟಿರುವುದು ಕನ್ನಡಿಗರಿಗೆ ತೀವ್ರ ನೋವು ಆಗಿದೆ ಎಂದು ಕರ್ನಾಟಕ ರಣಧೀರರ ವೇದಿಕೆಯು ಕರವೇ ಸೇನಾನಿಗಳನ್ನೂ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರವನ್ನ ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯಿಸಿ ನೆಲಮಂಗಲ ತಹಸೀಲ್ದಾರ್ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಕರ್ನಾಟಕದಲ್ಲಿ ವಾಣಿಜ್ಯ ವೈವಾಟು ವ್ಯಾಪಾರ ಮಾಡುವ ಅಂಗಡಿ ಮುಂಗಟ್ಟುಗಳು ಗೋದಾವುಗಳು ಕಾರ್ಖಾನೆಗಳು ಇನ್ನಿತರ ಕಚೇರಿ ಮಳಿಗೆಗಳು ಮತ್ತು ಮಾಲ್ ಗಳಲ್ಲಿ ಕನ್ನಡದಲ್ಲಿ ಹೆಸರಲಗೆ(ನಾಮಫಲಕ) ಅಳವಡಿಸಬೇಕಾದದ್ದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಆದರೆ ಇಲ್ಲಿ ಉತ್ತರ ಭಾರತದ ಗುಲಾಮಗಿರಿ ಮಾಡುತ್ತಿರುವುದು ಖಂಡನೀಯವಾದ ವಿಚಾರ, ಇಂಥ ನೀಚ ಗುಲಾಮಗಿರಿತನವನ್ನು ಪ್ರಶ್ನಿಸಿ ಬೃಹತ್ ಮಟ್ಟದ ಆಂದೋಲನವನ್ನ ಆಯೋಜಿಸಿದ್ದ ಟಿ.ಎ.ನಾರಾಯಣಗೌಡರನ್ನ ಕರ್ನಾಟಕ ರಾಜ್ಯ ಪೊಲೀಸ್ನವರು ಬಂಧಿಸಿರುವುದು ಮತ್ತು ಗೌಡರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸುವುದು ಕನ್ನಡಿಗರಿಗೆ ಇವರು ಮಾಡಿದ ಬಹುದೊಡ್ಡ ಮೋಸ ಹಾಗೂ ಕನ್ನಡಕ್ಕೆ ಮಾಡಿದ ಅನ್ಯಾಯ ಎಂದು ಹೇಳಬಹುದಾಗಿದೆ, ಈ ಕೂಡಲೇ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಗೃಹ ಸಚಿವರು ಮಧ್ಯಪ್ರವೇಶಿಸಿ ಟಿ.ಎ.ನಾರಾಯಣಗೌಡರನ್ನ, ಕನ್ನಡ ಸೇನಾನಿಗಳನ್ನ, ಕರವೇ ಕಾರ್ಯಕರ್ತರನ್ನ ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತೇವೆ, ಕನ್ನಡದ ಸೇನಾನಿಗಳನ್ನು ಬಿಡುಗಡೆ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಗೃಹ ಸಚಿವರು, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವುದರ ಜೊತೆಗೆ ರಾಜ್ಯದಲ್ಲಿ ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ಸಚಿವರಗಳು ಸಿಕ್ಕಲ್ಲೆಲ್ಲ ಕಪ್ಪು ಬಾವುಟ ಪ್ರದರ್ಶನ ಮಾಡಿ ಗೇರಾವ್ ಹಾಕುತ್ತೇವೆ ಎಂದು ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ಕೆ.ಆರ್ ರವರು ಮಾಧ್ಯಮದೊಂದಿಗೆ ಮಾತನಾಡಿದಾಗ ತಿಳಿಸಿದರು,
ಇದೇ ಸಂದರ್ಭದಲ್ಲಿ ಬಿ.ಎನ್.ವಿಜಯ್ ಕುಮಾರ್, ನವೀನ್ ಕುಮಾರ್, ಚೇತನ್ ಗೌಡ, ಪೂಜಾಪ್ಪ, ಗಂಗಾಧರ್, ಅರುಣ್ ಕುಮಾರ್, ಗಿರೀಶ್,ಮಹೇಶ್, ಮಾರಪ್ಪ.ಬಿ. ಮತ್ತಿತರರು ಹಾಜರಿದ್ದರು.