ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಫಂದಿಸಲು ಆಗ್ರಹ ;
ಶಿರಸಿಯಲ್ಲಿ ಬೃಹತ್ ‘ಜನತಾ ಗಣರಾಜ್ಯೋತ್ಸವ ಟ್ರಾö್ಯಕ್ಟರ್ ಪೆರೇಡ್’
ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಕೇಂದ್ರ ಸರ್ಕಾರದ ರೈತ ಮತ್ತು ಅರಣ್ಯವಾಸಿಗಳ ವಿರೋಧ ನೀತಿ ಖಂಡಿಸಿ ಶಿರಸಿಯಲ್ಲಿ ಇಂದು ಅರಣ್ಯವಾಸಿಗಳಿಂದ ‘ಜನತಾ ಗಣರಾಜ್ಯೋತ್ಸವ ಟ್ರಾö್ಯಕ್ಟರ್ ಪೆರೇಡ್’ ಸಂಘಟಿಸಲಾಯಿತು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಮಾರಿಕಾಂಬ ದೇವಾಲಯ ಏದುರುಗಡೆಯಿಂದ ಟ್ಯಾçಕ್ಟರ್ ರ್ಯಾಲಿ ಪ್ರಾರಂಭಗೊAಡು ನಗರದ ಪ್ರಮುಖ ಬೀದಿಗಳಲ್ಲಿ ಪೆರೇಡ್ ಸಂಘಟಿಸಲಾಯಿತು.
ಕೇಂದ್ರ ಸರ್ಕಾರವು ಕೃಷಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ರದ್ದುಪಡಿಸುವ ವಿದ್ಯುತ್ ತಿದ್ದುಪಡಿ ಮಸೂದೆ ರದ್ದತಿಗೆ, ಅರಣ್ಯ ಸಂರಕ್ಷಣಾ ಕಾಯಿದೆಗೆ ಅರಣ್ಯವಾಸಿಗಳ ಪರವಾಗಿ ರದ್ದುಪಡಿ ಮಾಡದೇ ಉದ್ಯಮೀಕರಣಕ್ಕೆ ಅರಣ್ಯ ಭೂಮಿ ನೀಡಲು ಕಾಯಿದೆ ಮಾರ್ಪಡಿಸಿದ್ದಕ್ಕೆ, ಅರಣ್ಯವಾಸಿಗಳ ಪರವಾಗಿ ರಾಷ್ಟಿçÃಯ ಅರಣ್ಯ ನೀತಿ ರಚಿಸಲು ಆಗ್ರಹಿಸಿ, ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಒತ್ತಾಯಿಸಿ ಪ್ರಮುಖ ಐದು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಟ್ರಾö್ಯಕ್ಟರ್ ಪೆರೇಡ್ ಸಂಘಟಿಸಲಾಗಿತ್ತು.
ಪೆರೇಡ್ನ ನೇತ್ರತ್ವವನ್ನು ನೆಹರೂ ನಾಯ್ಕ ಕಂಡ್ರಾಜಿ, ಭೀಮ್ಸಿ ವಾಲ್ಮೀಕಿ ಯಲ್ಲಾಪುರ, ಇಬ್ರಾಹಿಂ ಗೌಡಳ್ಳಿ, ಮಹಂತೇಶ್ ನಾಯ್ಕ, ಭಾಸ್ಕರ ಗೌಡ ಹಿತ್ಲಳ್ಳಿ, ಸೀತಾರಾಮ ನಾಯ್ಕ ಕುಂದರಗಿ, ನಾಗರಾಜ ಮರಾಠಿ ಕೋಡಿಗದ್ದೆ ವಹಿಸಿದ್ದರು. ಎಮ್ ಆರ್ ನಾಯ್ಕ ಕಂಡ್ರಾಜಿ, ಎಮ್ ಕೆ ನಾಯ್ಕ ಕಂಡ್ರಾಜಿ, ಸುರೇಶ್ ರಾಮಾ ನಾಯ್ಕ, ಚಂದ್ರು ನಾಯ್ಕ, ರಾಜು ನರೇಬೈಲ್, ಮಲ್ಲೇಶಿ ಸಂತೊಳ್ಳಿ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರಕ್ಕೆ ಒತ್ತಾಯ:
ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ, ಕರ್ನಾಟಕದ ಹಿಂದಿನ ಸರ್ಕಾರವು ಜ್ಯಾರಿಗೆ ತಂದಿದ್ದ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಯ ಕಾನೂನುಗಳಾದ ಎ.ಪಿ.ಎಂ.ಸಿ, ಭೂ ಸುಧಾರಣಾ ಕಾಯಿದೆ, ರೈತ ವಿರೋಧಿ ಕಾನೂನುಗಳನ್ನು ಇಂದಿನ ರಾಜ್ಯ ಸರ್ಕಾರವು ಕೈಬಿಡಬೇಕೆಂದು ಈ ಸಂದರ್ಭದಲ್ಲಿ ಮಾರಿಕಾಂಬ ದೇವಾಲಯದ ಏದುರುಗಡೆ ಜರುಗಿದ ಸಭೆಯಲ್ಲಿ ಅಧ್ಯಕ್ಷ ರವೀಂದ್ರ ನಾಯ್ಕ ಅವರು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.