ಕನ್ನಡ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾದ ಉಮೇಶ ಮುಂಡಳ್ಳಿ
ಭಟ್ಕಳ- ಕನ್ನಡ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಹಾಗೂ ಉನ್ನತಿ ಫೌಂಡೇಶನ್ ಧಾರವಾಡ ಇವರ ಸಹಯೋಗದಲ್ಲಿ ಆಯೋಜಿಸಿದ ಶರಣರ ಕುರಿತು ಕವಿತೆ ರಚನೆಯಲ್ಲಿ ೨೦ ನಿಮಿಷ ೨೦ ಸೆಕೆಂಡ್ ನಲ್ಲಿ ಸಿದ್ದಗಂಗೆಯ ಶಿವಕುಮಾರ ಶ್ರೀ ಗಳ ಕುರಿತು ಕವಿತೆ ಬರೆಯುವ ಮೂಲಕ ಜಿಲ್ಲೆಯ ಪ್ರತಿಭಾನ್ವಿತ ಕವಿಗಳಾದ ಉಮೇಶ ಮುಂಡಳ್ಳಿ ಕನ್ನಡ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿರುತ್ತಾರೆ.
ಹಾವೇರಿಯ ಬಸವ ಕೇಂದ್ರ ಹೊಸಮಠದಲ್ಲಿ ಇತ್ತೀಚೆಗೆ ಕಾರ್ಯಕ್ರಮ ರೆಕಾರ್ಡ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕನ್ನಡ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಸಂಸ್ಥಾಪಕ ಮಂಜುನಾಥ ಬಾರ್ಗೇರಾ ಈ ಸಂಧರ್ಭದಲ್ಲಿ ಹಾಜರಿದ್ದರು.