ಭಟ್ಕಳದಲ್ಲಿ ಫೆಬ್ರವರಿ 19 ರಂದು ಅಂಜುಮನ್ ಇನ್ಸ್ಟಿಟ್ಯೂಟ್ ಓಫ್ ಟೆಕ್ನಾಲಜಿ ಹಾಗೂ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ MBA ಫ್ರೆಷೆರ್ಸ್ ಇಂಡಕ್ಷನ್ ಕಾರ್ಯಕ್ರಮ
ಭಟ್ಕಳ-ಭಟ್ಕಳ ಫೆಬ್ರವರಿ 19 2024 ರ ಗುರುವಾರದಂದು ಅಂಜುಮನ್ ಇನ್ಸ್ಟಿಟ್ಯೂಟ್ ಓಫ್ ಟೆಕ್ನಾಲಜಿ ಹಾಗೂ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ MBA ಫ್ರೆಷೆರ್ಸ್ ಇಂಡಕ್ಷನ್ ಅಥವಾ ಪ್ರವೇಶ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಜರುಗಿಸಲಾಯಿತು. ಈ ಕಾರ್ಯಕ್ರಮವು ಸರಿಯಾಗಿ ಬೆಳಿಗ್ಗೆ 9.30 ಕ್ಕೆ ಪ್ರಾರಂಭಿಸಲಾಗಿ ಅದರ ನಿರ್ದೇಶನ ವಹಿಸಿದ ಪ್ರೊ. ಮುಫಿಯಾ ಶೇಖ್ ಆರಂಭದಲ್ಲಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ನಂತರ ಸಂಸ್ಥೆಯ ಅನುಭವಿ ಪ್ರೊಫೆಸರ್ ಆದ ಪ್ರೊ. ಪ್ರೀತಿ ಕಲ್ಗುಟ್ಕರ್ ರವರು ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿ ಕಾಲೇಜಿನ ಪ್ರಿನ್ಸಿಪಾಲರಾದ ಪ್ರೊ. ಡಾ.ಫಜಲೂರ್ ರಹಮಾನ್ ಮತ್ತು ಕಾಲೇಜಿನ ರಿಜಿಸ್ಟರಾರ್ ಹಾಗೂ ಹೆಚ್.ಓ.ಡಿ ಆದ ಪ್ರೊ. ಜಾಹಿದ್ ಹಸ್ಸನ್ ಖರುರೀ ಅವರನ್ನು ಆದರದಿಂದ ಬರಮಾಡಿಕೊಂಡರು ಹಾಗೆ MBA ಫ್ರೆಷೆರ್ಸ್ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ನೆನಪಿನ ಕಾಣಿಕೆಯಾಗಿ ಉಡುಗೊರೆ ನೀಡಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ MBA ಫ್ರೆಷೆರ್ಸ್ ವಿದ್ಯಾರ್ಥಿಗಳಲ್ಲದೆ ಅವರ ಕುಟುಂಬದ ಸದಸ್ಯರು, ಪ್ರಾಧ್ಯಾಪಕರು ಹಾಗೂ ಸಿನಿಯರ್ ಸ್ಟೂಡೆಂಟ್ಸ್ಗಳು ಸಹ ಭಾಗವಹಿಸಿ ಕಾರ್ಯಕ್ರಮ ಚಂದಗಾಣಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರಿನ್ಸಿಪಾಲ್ ಡಾ. ಫಜಲೂರ್ ರಹಮಾನ್ ಮತ್ತು ರೆಜಿಸ್ಟರಾರ್ ಆದ ಪ್ರೊ. ಜಾಹಿದ್ ಹಸ್ಸನ್ ಖರೂ ರೀ ರವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಇಂದಿನ ವಿದ್ಯಾರ್ಥಿಗಳಿಗೆ MBA ಶಿಕ್ಷಣದ ಅಗತ್ಯತೆ ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿಹೇಳಿದರು. ಅದಲ್ಲದೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಬೇಕಾಗುವ ಶಿಸ್ತು, ಸ್ವಾವಲಂಬನೆ ಮತ್ತು ಏಕಾಗ್ರತೆಗಳಂತಹ ವ್ಯಕ್ತಿತ್ವ ವಿಕಸನದ ಬಗ್ಗೆ ಮನದಟ್ಟು ಮಾಡಿಸಿದರು. ಹಾಗೆಯೇ ವಿದ್ಯಾರ್ಥಿಗಳು ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತವಾಗಿ ಲಭ್ಯವಿರುವ ಸವಲತ್ತುಗಳಾದ ಪುಸ್ತಕ ಭಂಡಾರ, ಕಂಪ್ಯೂಟರ್, ಕ್ರೀಡಾಸಾಮಗ್ರಿ ಹಾಗೂ ಇನ್ನಿತರ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನದೆಡೆಗೆ ಸಾಗಬೇಕೆಂದು ಹೇಳಿದರು. ಅಂಜುಮನ್ ಶಿಕ್ಷಣ ಸಂಸ್ಥೆಯ (AITM) ಇಂದಿನ ಮತ್ತು ಭವಿಷ್ಯದ ಗುರಿಯಾದ ಶೈಕ್ಷಣ ಉತ್ಕ್ರಷ್ಟತೆಯ ಬಗ್ಗೆ ವಿವರಿಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಶೈಕ್ಷಣ ಮೌಲ್ಯದಿಂದ ಕೂಡಿದ ಆಧುನಿಕ ಶೈಕ್ಷಣಿಕ ಉತ್ಕ್ರಷ್ಟತೆಯನ್ನು ಅಳವಡಿಸುವುದಾಗಿ ಆಶ್ವಾಸನೆ ನೀಡಿದರು. ಹಾಗೆಯೇ ಕಾರ್ಯಕ್ರಮದ ಕೊನೆಯ ಹಂತದಲ್ಲಿ ಪ್ರೊ. ಸಾದ್ ಕೋಲಾ ರವರು ಧನ್ಯವಾದ ಮತ್ತು ಶುಭಾಶಯವನ್ನು ಕೋರಿದರು. ಪ್ರೊ. ಶ್ರೀಕಾಂತ್ ಮತ್ತು ಪ್ರೊ. ತಸ್ಫಿಯ ರವರು ಹೊಸ ವಿದ್ಯಾರ್ಥಿಗಳ ಕ್ರೀಡಾಮನೋಭಾವ ಮತ್ತು ಮನೋರಂಜನೆಗಾಗಿ ಕೆಲವು ಒಳಾಂ ಗನ ಆಟವನ್ನು ನಡೆಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.ಸಂಕ್ಷಿಪ್ತವಾಗಿ ಈ ಕಾರ್ಯಕ್ರಮವು ಭವಿಷ್ಯದ ನಾಯಕರನ್ನು ರೂಪಿಸುವುದು ಮತ್ತು ಶಿಕ್ಷಣದ ಉತ್ಕ್ರಷ್ಟತೆಯ ಸಂಸ್ಕೃತಿಯನ್ನು ಬೆಳೆಸುವುದರ ಪ್ರತಿಜ್ಞೆಯನ್ನು ಸಾರಿತು.