ಅಂಕೋಲಾ ಬಸ್ ನಿಲ್ದಾಣಕ್ಕೆ ಸಿಸಿಟಿವಿ ಕಣ್ಗಾವಲು. ಸಿಸಿಟಿವಿ ಹಾಕಲು ಮುತುವರ್ಜಿ ವಹಿಸಿದ ಪೊಲೀಸ್ ಇಲಾಖೆಯ ಕ್ರಮಕ್ಕೆ ಸಾರ್ವಜನಿಕರಿಂದ ಬಹುಪರಾಕ್.
ಅಂಕೋಲ ನಗರದ ಹೃದಯ ಭಾಗದಲ್ಲಿರುವ ಹೊಸ ಬಸ್ ನಿಲ್ದಾಣವನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ, ಈ ಆಧುನಿಕ ಸೌಕರ್ಯಗಳೊಂದಿಗೆ ನಿರ್ಮಿತವಾದ ಬಸ್ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಸಾರಿಗೆ ಸಂಸ್ಥೆ ಕಲ್ಪಿಸಿರಲಿಲ್ಲ. ಇದೀಗ ಅಂಕೋಲ ಪೊಲೀಸರೂ ದಾನಿಗಳಿಂದ ಸಹಾಯದಿಂದ ಬಸ್ ನಿಲ್ದಾಣದ ಒಳಗೂ ಹೊರ ಹೋಗುವ ಪ್ರವೇಶ ದ್ವಾರದಲ್ಲಿ ಸಿ ಸಿ ಟಿವಿ ಕ್ಯಾಮರಗಳನ್ನು ಅಳವಡಿಸಿರುವುದು ತಿಳಿದುಬಂದಿದೆ.
ಸಿಸಿಟಿವಿ ಕ್ಯಾಮೆರಾಗಳ ಅನುಪಸ್ಥಿತಿಯಿಂದಾಗಿ, ಬಸ್ ನಿಲ್ದಾಣದಲ್ಲಿ ಇಟ್ಟಿದ್ದ ಬೈಕ್ ಕಳ್ಳತನದಂತಹ ಘಟನೆಗಳು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದವು . ಬಸ್ ನಿಲ್ದಾಣದೊಳಗೆ ನಡೆಯುತ್ತಿದ್ದ ಪಿಕ್ ಪಾಕೆಟ್. ಗುಂಪು ಘರ್ಷಣೆ. ವಿದ್ಯಾರ್ಥಿಗಳ ಪುಂಡಾಟ. ಮಾದಕ್ ವಸ್ತುಗಳ ಸಾಗಾಟ ತಡೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕೆಂದು ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು
ಲಕ್ಷಾಂತರ ರೂಪಾಯಿ ಬೆಲೆಬಾಳುವ ಬೈಕುಗಳು ಕದಿಯಲ್ಪಡುತ್ತಿರುವ ಕುರಿತು ಸಾಕಷ್ಟು ಪ್ರಕರಣಗಳು ಅಂಕೋಲಾ ಬಸ್ ನಿಲ್ದಾಣ ದಿಂದಲೇ ವರದಿಯಾಗಿದ್ದವು.
ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಇಲ್ಲದೆ ಇರುವ ಕಾರಣ ಪೊಲೀಸರಿಗೆ ಸಹ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ತೊಂದರೆಯಾಗುತ್ತಿದ್ದವು .
ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದನ್ನು ಗಮನಿಸಿದ ಕಳ್ಳರಿಗೆ ಮತಷ್ಟು ಬೈಕ್ ಗಳನ್ನು ಕಳ್ಳ ತನ ಮಾಡಿ ಹೊತ್ತೊಯಲು ಬಸ್ ನಿಲ್ದಾಣ ವರದಾನವಾಗಿತ್ತು
ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ನಡೆದಾಗ ಕ್ಯಾಮರಾ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಮತ್ತು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳ ನಡುವೆ ಹಲವು ಬಾರಿ ಮಾತಿನ ಚಕಮಖಿ ನಡೆದಿದೆ.
ಕೊನೆಗೂ ಅಂಕೋಲ ಪೊಲೀಸರ ಮುತುವರ್ಜಿಯಿಂದ ಬಸ್ ನಿಲ್ದಾಣದ ಒಳಬರುವ ಮತ್ತು ಹೊರಹೋಗುವ ಎರಡು ಕಡೆಯ ಪ್ರವೇಶ ದ್ವಾರದ ಸ್ಥಳದಲ್ಲಿ ಒಟ್ಟು ಐದು ಕ್ಯಾಮರಗಳನ್ನು ಅಳವಡಿಸಲಾಗಿದೆ..
ಅಂಕೋಲಾ ಪೊಲೀಸ್ ಇಲಾಖೆಗೆ ಹೊಸ ಅಧಿಕಾರಿಗಳ ಆಗಮನದ ಬೆನ್ನಲ್ಲೇ ಹಲವು ಅಕ್ರಮ ಚಟುವಟಿಕೆಗೆ ಕಡಿವಾಣ ಬಿದ್ದಿದ್ದು.
ಬಸ್ ನಿಲ್ದಾಣದಂತ ಪ್ರಮುಖ ಸ್ಥಳದಲ್ಲಿ ಅಪರಾಧ ಕೃತ್ಯ ತಡೆಯಲು ಸಿಸಿ ಟಿವಿ ಅಳವಡಿಸಿ ನಾಗರಿಕರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿರುವುದರಿಂದ ಅಂಕೋಲ ಪೊಲೀಸರ ಕಾರ್ಯ ವೈಖರಿಗೆ ಪ್ರಜ್ಞಾವಂತ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.