ಬಿಜೆಪಿ ಯವಿಶ್ವೇಶ್ವರ ಹೆಗಡೆ ಕಾಗೇರಿ ಯಾವ ಯಾವ ತಾಲೂಕಿನಲ್ಲಿ ಎಷ್ಟು ಮತಗಳ ಮುನ್ನಡೆ ಪಡೆದರು ವಿವರ ಇಲ್ಲಿದೆ ನೋಡಿ!
ಕುಮಟಾ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ 782.495 ಮತಗಳನ್ನು ಪಡೆದಿದ್ದು, ಅವರ ಎದುರಾಳಿ ಕಾಂಗ್ರೆಸಿನ ಅಂಜಲಿ ನಿಂಬಾಳ್ಕರ್ 445,067 ಮತಗಳನ್ನು ಗಳಿಸಿದ್ದು, ಸುಮಾರು 337, 428 ಮತಗಳ ಅಂತರದಿಂದ ಕಾಗೇರಿ ಗೆಲುವಿನ ನಗೆ ಬೀರಿದ್ದಾರೆ.
8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದ, ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಕಾಗೇರಿಯವರು ಪಡೆದ ಮತಗಳ ಮುನ್ನಡೆಯ ಮಾಹಿತಿ ಇಲ್ಲಿದೆ. ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ – 39,928 ಮತಗಳ ಮುನ್ನಡೆ , ಕಿತ್ತೂರು – 36,242 ಮತ ಮುನ್ನಡೆ, ಖಾನಾಪುರ – 59,830 ಮತ ಮುನ್ನಡೆ, ಯಲ್ಲಾಪುರ – ಮುಂಡಗೋಡು – 18,387 ಮತಗಳ ಮುನ್ನಡೆ, ಕುಮಟಾ – ಹೊನ್ನಾವರ – 53,493 ಮತಗಳ ಮುನ್ನಡೆ, ಭಟ್ಕಳ – 32,403 ಮತ ಮುನ್ನಡೆ, ಕಾರವಾರ- ಅಂಕೋಲಾ ಅತಿ ಹೆಚ್ಚು – 65,428 ಮತಗಳ ಮುನ್ನಡೆ, ಹಳಿಯಾಳ – ಜೊಯ್ಡಾ ವಿಧಾನಸಭಾ ಕ್ಷೇತ್ರದಲ್ಲಿ – 28,880 ಮತಗಳಿಂದ ಕಾಗೇರಿ ಮುನ್ನಡೆ ಪಡೆದಿದ್ದಾರೆ.