ತಾವು ಕೂಗಿದರೆ ಮಾತ್ರ ಬೆಳಗಾಗುತ್ತದೆ ಎಂಬ ಕೋಳಿಗಳಿಗೆ ಜಿಲ್ಲೆಯ ಜನ ತಕ್ಕ ಪಾಠ ಕಲಿಸಿದ್ದಾರೆ-ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಪಕ್ಷ ನಾಯಕರ ವಿರುದ್ಧ ವಾಗ್ದಾಳಿ
ಕುಮಟಾ: ಪ್ರಧಾನಿ ಮೋದಿಯವರ ಜನಹಿತ ಕಾರ್ಯ, ಅಭಿವೃದ್ಧಿ ಕೆಲಸಗಳ ಪರಿಣಾಮ, ಪಕ್ಷದ ನಿಷ್ಟಾವಂತ ಕಾರ್ಯಕರ್ತರ ಪರಿಶ್ರಮ ಪ್ರತಿಫಲವಾಗಿ ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿದೆ. ಈ ಗೆಲುವನ್ನು ಸಮಸ್ತ ಜನತೆಗೆ ಅರ್ಪಿಸುವುದಾಗಿ ಬಿಜೆಪಿಯ ವಿಜೇತ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಅವರು ಕುಮಟಾದ ಮತ ಎಣಿಕಾ ಕೇಂದ್ರದಲ್ಲಿ ತಮ್ಮ ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಕನ್ನಡದಲ್ಲಿ ಬಿಜೆಪಿಯು ಗಟ್ಟಿಯಾಗಿದೆ. ಯಾರೋ ಒಬ್ಬರ ಸ್ವತ್ತಲ್ಲ. ತಾವು ಕೂಗಿದರೆ ಮಾತ್ರ ಬೆಳಗಾಗುತ್ತದೆ ಎಂಬ ಕೋಳಿಗಳಿಗೆ ಜಿಲ್ಲೆಯ ಜನ ತಕ್ಕ ಪಾಠ ಕಲಿಸಿದ್ದಾರೆ. ಗೆಲುವಿಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.