ಕಾರ್ ಗ್ಯಾರೇಜ್ ಸಾಯಿ ಆಟೋ ವರ್ಕ್ಸ್ ಕಾರವಾರ ರೋಡ್ ಅಜ್ಜಿಕಟ್ಟ.ಅಂಕೋಲಾ .
ಗ್ಯಾರೇಜ್ ಕೆಲಸಕ್ಕೆ ಹುಡುಗರು ಬೇಕಾಗಿದ್ದಾರೆ.
ವಿದ್ಯಾರ್ಹತೆ : ಎಸ್ ಎಲ್ ಸಿ ಪಾಸ ಅಥವಾ ಫೇಲ್.
ಆಕರ್ಷಕ ವೇತನ ನೀಡಲಾಗುವುದು.
ಮಾಲೀಕರು : ಮಂಜುನಾಥ್ ಆಚಾರಿ.
ಸಂಪರ್ಕಿಸಿ- 9620166292.
*ನೆರೆ ಸಂತ್ರಸ್ಥರ ನೆರವಿಗೆ ಬಂದ ಸೇವಾ ಕನ್ನಡಿಗರು ಕ್ಲಬ್ ವಿ ಪಿಟ್ನೆಸ್ ಅಂಕೋಲಾದ್ ಯುವ ಪಡೆಯ ತಂಡದ ಕಾರ್ಯಕ್ಕೆ ಶ್ಲಾಘನೆ.*
ಅಂಕೋಲಾ-ವರುಣನ ಅಬ್ಬರಕ್ಕೆ ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿತದಿಂದಾಗಿ 10ಕ್ಕು ಹೆಚ್ಚು ಜನ ಮೃತರಾಗಿದ್ದಾರೆ ಎಂಬ ಶಂಕೆ ಇದ್ದು.. 8 ಮೃತದೇಹಗಳು ಸಿಕ್ಕಿವೆ.. ಉಳುವರೆ ಗ್ರಾಮದ 15 ಕ್ಕು ಕುಟುಂಬದ ಜನರ ಬದುಕು ಬೀದಿಗೆ ಬಂದಿದೆ….
ಅಧಿಕಾರಿ ವರ್ಗ ಇನ್ನುಳಿದ ಮೃತ ದೇಹಕ್ಕಾಗಿ ನಿರಂತರವಾಗಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯ ನಡೆವೆಯೂ ಶೋಧಕಾರ್ಯ ಮುಂದುವರಿಸಿದ್ದಾರೆ.
ಶಿರೂರಿನ ಮತ್ತು ಉಳುವರೆ ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಅಲ್ಲಿರುವ ಜನರು ತಮ್ಮ ಸರ್ವಸ್ವವನ್ನು ಕಳೆದುಕೊಂಡಿರುವ ಸಂಕಷ್ಟ ಸಂದರ್ಭದಲ್ಲಿ ವಿಧಿವಶರಾದ ಕುಟುಂಬಕ್ಕೆ ಸಂತಾಪವನ್ನು ಸೂಚಿಸಿ.ಬೊಬ್ರುವಾಡ ಗ್ರಾಮದ ನಿವಾಸಿ ವಿಘ್ನೇಶ್ ನಾಯ್ಕ್ ನೇತೃತ್ವದ ಸೇವಾ ಕನ್ನಡಿಗರು ಕ್ಲಬ್ ವಿ ಪಿಟ್ನೆಸ್ ಜಿಮ್ ಅಂಕೋಲಾ ದ ಯುವಪಡೆ ಜೀವ ಸಂಕುಲದ ಉಳಿವಿಗೆ. ನೆರೆ ಸಂತ್ರಸ್ತರಿಗೆ ನೆರವಾಗಲು ದಾನಿಗಳಿಗೆ ಸ್ವಯಂ ಪ್ರೇರಿತವಾಗಿ ದೇಣಿಗೆ ನೀಡುವಂತೆ ಮನವಿ ಮಾಡಿದ ಪರಿಣಾಮದಿಂದಾಗಿ.
ಅಲ್ಪಾವಧಿಯಲ್ಲಿ ಈ ತಂಡ 2 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿ ನಿರಾಶ್ರಿತರ ಸ್ಥಳಕ್ಕೆ ಧಾವಿಸಿ ನೆರವು ನೀಡಿದೆ.
21/07/2024 ರಂದು ಉಳುವರೆ ಗ್ರಾಮಕ್ಕೆ ತೆರಳಿದ ಯುವ ಪಡೆ ಶಾಲೆಯ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ನಿರಾಶ್ರಿತರಿಗೆ ಮಧ್ಯಾಹ್ನ ಮತ್ತು ರಾತ್ರಿ ಸೇರಿ 800 ಪಲಾವ್ ಮತ್ತು 800 ಮೊಟ್ಟೆಗಳನ್ನು ನೀಡಿದ್ದಾರೆ.
ದಿನಾಂಕ 22/07/2024 ರಂದು ಉಳುವರೆ ಗ್ರಾಮದಲ್ಲಿ ಮನೆಮಠಗಳನ್ನು ಕಳೆದುಕೊಂಡ 15 ಕುಟುಂಬಗಳಿಗೆ ಒಂದೊಂದು ಕಿಟ್ಟು 5000 ರೂಪಾಯಿ ಮೌಲ್ಯದ ಒಟ್ಟು 15 ಆಹಾರ ಸಾಮಗ್ರಿ ಗಳ ಕಿಟ್ಗಳನ್ನು ನೀಡಿದ್ದಾರೆ.. ಈ ಯುವ ಪಡೆಗೆ ಕಿಟ್ಗಳನ್ನು ನೀಡುವಲ್ಲಿ ಎಂಎಂ ಫೌಂಡೇಶನ್ ಅರುಣ ಪಬ್ಲಿಸಿಟಿ ದಾನಿಗಳು ನೆರವು ನೀಡಿದ್ದಾರೆ.
ದಿನಾಂಕ23/07/2024 ರಂದು ಶಿರೂರ್ ಗುಡ್ಡ ಕುಸಿದ್ದರಿಂದ ಲಾರಿ ಚಾಲಕರು ಮುಂದೆ ಹೋಗಲಾರದೆ ಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿರುವ ಬಾಳೇಗುಳಿಯಿಂದ ನಿಂತಿರುವ 200 ಲಾರಿ ಚಾಲಕ ಮತ್ತು ಕ್ಲೀನರ್ ಗಳಿಗೆ ಒಂದು ಹೊತ್ತಿನ ಊಟ ವ್ಯವಸ್ಥೆ ಮಾಡಿದ್ದಾರೆ.
ದಿನಾಂಕ 23/07/2024 ರಂದು ಶಿರೂರಿನ ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಜಗನ್ನಾಥ ಜಟ್ಟಿ ನಾಯ್ಕ ಕುಟುಂಬದ ಮಾಹಿತಿಯನ್ನು ಬೆಳೆಸಿ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ನೀಲಕಂಠ ನಾಯಕ್ ರವರಿಂದ ಮಾಹಿತಿ ಪಡೆದ ಈ ತಂಡ ಶಿರೂರಿಗೆ ದಾವಿಸಿ ಜಗನ್ನಾಥ ಕುಟುಂಬದ ಮೂವರು ಹೆಣ್ಣು ಮಕ್ಕಳಿಗೆ ಸೇರಿ 1 ಲಕ್ಷ ಮೌಲ್ಯದ ಚೆಕ್ಕನ್ನು. ಹಾಗೂ 5000 ರೂಪಾಯಿ ಮೌಲ್ಯದ 4 ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಹಿರಿಯ ನ್ಯಾಯವಾದಿ ಸುಭಾಷ್ ನಾರ್ವೆಕರ. ಬೆಳೆಸೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೀಲಕಂಠ ನಾಯಕ್. ಗಣ್ಯರಾದ ಭಾಸ್ಕರ ನಾರ್ವೆಕರ. ಹಾಗೂ ಇನ್ನಿತರ ಸಾರ್ವಜನಿಕರ ಸಮ್ಮುಖದಲ್ಲಿ ನೀಡಿದರು. ಹಾಗೂ ಜಗನ್ನಾಥ ಕುಟುಂಬದ ಹೆಣ್ಣು ಮಕ್ಕಳಿಗೆ ಸಾಂತ್ವನ ಹೇಳಿದರು.
ವಿಘ್ನೇಶ್ ನಾಯ್ಕ ನೇತೃತ್ವದ ಸೇವಾ ಕನ್ನಡಿಗರು ಕ್ಲಬ್ ವಿ ಪಿಟ್ನೆಸ್ ಜಿಮ್ ಅಂಕೋಲಾ ತಂಡದವರು ಹಿಂದಿನ ವರ್ಷವೂ ಕೂಡ ಶಿರೂರಿನ ನೆರೆ ಸಂತ್ರಸ್ತರಿಗೆ ಅವಶ್ಯಕ ಆಹಾರ ಸಾಮಗ್ರಿಗಳನ್ನು ನೀಡಿದ್ದನ್ನು ಸ್ಮರಿಸಬಹುದಾಗಿದೆ.ತಮ್ಮ ಬಿಡುವಿಲ್ಲದ ಸಮಯದಲ್ಲೂ ಜೀವ ಸಂಕುಲದ ಉಳಿವಿಗಾಗಿ ಸ್ವಪ್ರೇರಣೆಯಿಂದ ಮುಂದೆ ಬಂದು ತಮ್ಮ ಕೈಲಾದಷ್ಟು ಅಳಿಲು ಸೇವೆಯನ್ನು ಮಾಡುತ್ತಿರುವ ಸೇವಾ ಕನ್ನಡಿಗರು ಕ್ಲಬ್ ವಿ ಫಿಟ್ನೆಸ ನ್ ಯುವ ಪಡೆಯ ಸೇವಾ ಕಾರ್ಯಕ್ಕೆ ಅಂಕೋಲಾದ ಸಮಸ್ತ ನಾಗರಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ..
ಸೇವಾ ಕನ್ನಡಿಗರು ಕ್ಲಬ್ ವಿ ಫಿಟ್ನೆಸ್ಅಂಕೋಲಾ ತಂಡಕ್ಕೆ ನೆರ ಸಂತ್ರಸ್ತರಿಗೆ ನೆರವಾಗಲು ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಧನಸಹಾಯ ಮಾಡಿದ ದಾನಿಗಳಿಗೆ ಯುವಪಡೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ..