ಅಂಕೋಲಾ ಶಿರೂರಿನಲ್ಲಿ ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾದ ಲಾರಿ ಮತ್ತು ಕೇರಳದ ಅರ್ಜುನ್ ಪತ್ತೆ ಕಾರ್ಯಕ್ಕೆ ಆಗಮಿಸಿದ ಆಪತ್ಭಾಂಧವ ಈಶ್ವರ್ ಮಲ್ಪೆ ನೇತೃತ್ವದ ತಂಡ
ಅಂಕೋಲಾ-ಅಂಕೋಲಾ ಶಿರೂರಿನಲ್ಲಿ ಲಾರಿ ಮತ್ತು ಕೇರಳದ ಅರ್ಜುನ್ ಪತ್ತೆ ಕಾರ್ಯಕ್ಕೆ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಬಂದು ಇಂದು ಬೆಳ್ಳಿಗೆ ಕಾರ್ಯಾಚರಣೆ ಶುರು ಮಾಡಿದೆ.
ಯಾರೂ ಕೂಡ ಅರಗಿಸಿಕೊಳ್ಳಲಾಗದಂತಹ ನೋವಿನ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ನಡೆದು ಇಂದಿಗೆ ಹತ್ತು ದಿನಗಳು ಕಳೆದು ಹೋಗಿದೆ.
ಇದುವರೆಗೆ 8 ಜನರ ಮ್ರತದೇಹ ಪತ್ತೆಯಾಗಿದ್ದು, ಭಾರತ್ ಬೆಂಝ್ ಲಾರಿ ಜೊತೆಗೆ ಚಾಲಕ ಅರ್ಜುನ್ ಮತ್ತು ಇತರ ಇಬ್ಬರು ವ್ಯಕ್ತಿಗಳು ಇನ್ನೂ ನಾಪತ್ತೆಯಾಗಿದ್ದಾರೆ.
ದುರಂತ ಸಂಭವಿಸಿದ ಸ್ಥಳದಲ್ಲಿ ಪೋಲೀಸ್ ಇಲಾಖೆ , ಸ್ಥಳೀಯರು, ಅಗ್ನಿಶಾಮಕದಳ, ರಕ್ಷಣಾ ತಂಡಗಳು, ಎನ್ ಡಿ ಆರ್ ಎಫ್ ಪಡೆ ನಂತರ ಸೇನೆಯನ್ನೂ ಕರೆಸಿ ರಕ್ಷಣಾ (ತೆರವು) ಕಾರ್ಯಾಚರಣೆ ನಡೆಯುತ್ತಿದೆ.
ಇದೀಗ ಲಾರಿ ಇದೆ ಎಂದು ಶಂಕಿಸಲಾದ ಸ್ಥಳದಲ್ಲಿ ಲಾರಿ ಇರುವಿಕೆಯನ್ನು ಖಾತ್ರಿ ಪಡಿಸಲು ಮತ್ತು ಲಾರಿ ಒಳಗಡೆ ಇರುವ ಚಾಲಕ ಅರ್ಜುನ್ ನನ್ನು ಹೊರತೆಗೆಯಲು ಆಪತ್ಭಾಂಧವ ಈಶ್ವರ್ ಮಲ್ಪೆಯವರಿಗೆ ಪೋಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಂದ ಕರೆ ಬಂದಿದೆ.
ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ನಿನ್ನೆ ಮಧ್ಯರಾತ್ರಿ ಮಲ್ಪೆಯಿಂದ ಹೊರಟು , ಸುಮಾರು ಬೆಳ್ಳಿಗೆ ಅಂಕೋಲಾ ಶಿರೂರಿನಲ್ಲಿ ಅವಘಡ ನಡೆದ ಸ್ಥಳಕ್ಕೆ ತಲುಪಿ ಕಾರ್ಯಾಚರಣೆಯನ್ನು ಶುರುಮಾಡಿದೆ.
ಈ ಕಾರ್ಯಾಚರಣೆಯು ನಾವೆಣಿಸಿದಷ್ಟು ಸುಲಭವಿಲ್ಲ . ಜೀವದ ಹಂಗನ್ನು ತೊರೆದು ನೀರಿನಾಳದಲ್ಲಿ ಹುಡುಕಾಟ ನಡೆಸಬೇಕಾಗಿದೆ.
ಆದಷ್ಟು ಬೇಗನೆ ಈ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥನೆಮಾಡಿಕೊಳ್ಳುತ್ತಿದ್ದಾರೆ.