ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಮುಸ್ಲಿಂ ಯುವಕ ಅಲ್ತಾಫ್ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಹಿಂದೂ ಯುವತಿ ಮೇಲೆ ಗ್ಯಾಂಗ್ ರೇಪ್
ಕಾರ್ಕಳ- ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಮುಸ್ಲಿಂ ಯುವಕನೊಬ್ಬ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಯುವತಿಯೊಬ್ಬಳ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಘಟನೆ ನಿನ್ನೆ ಮಧ್ಯಾಹ್ನ ನಡೆದಿದ್ದು ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಅಯ್ಯಪ್ಪನಗರ ನಿವಾಸಿ ಹಿಂದೂ ಯುವತಿಗೆ ಮೂರು ತಿಂಗಳ ಹಿಂದೆ ಮುಸ್ಲಿಂ ಯುವಕ ಅಲ್ತಾಫ್ ಪರಿಚಯವಾಗಿದ್ದು, ಅವನು ದಿನಾಂಕ 23/08/2024 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ಸಂತ್ರಸ್ತೆಯನ್ನು ಅಯ್ಯಪ್ಪನಗರ ಜೇನು ಕೃಷಿ ಸ್ಥಳದ ಬಳಿಯಿಂದ ಆತನ ಬಿಳಿ ಬಣ್ಣದ ಕಾರಿನಲ್ಲಿ ಬಲಾತ್ಕಾರವಾಗಿ ಕರೆದುಕೊಂಡು ಹೋಗಿದ್ದ.
ಬಳಿಕ ಕೌಡೂರು ಗ್ರಾಮದ ರಂಗನಪಲ್ಕೆ ಕಾಡಿನ ಜಾಗಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿಗೆ ಇತರ ಇಬ್ಬರು ಕಾರಿನಲ್ಲಿ ಬಂದು ಬಿಯರ್ ಬಾಟಲಿಗಳನ್ನು ಆಲ್ತಾಫ್ ನಲ್ಲಿ ನೀಡಿದ್ದಾರೆ ಎನ್ನಲಾಗಿದೆ.ಆರೋಪಿ ಅಲ್ತಾಫ್ ನು ಸುಮಾರು 01 ಗಂಟೆಗೆ ಬಿಯರ್ ಬಾಟಲಿಗೆ ಯಾವುದೋ ಮಾದಕ ವಸ್ತುವನ್ನು ಬೆರೆಸಿ ಸಂತ್ರಸ್ತೆಗೆ ಬಲಾತ್ಕಾರವಾಗಿ ಕುಡಿಸಿ ನಂತರ ಅವಳ ಹತೋಟಿ ತಪ್ಪಿದಾಗ, ಕಾರಿನಲ್ಲಿ ಅವಳ ಹಾಗೂ ಅವನ ಬಟ್ಟೆಗಳನ್ನು ಬಿಚ್ಚಿ ಅವಳ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.
ನಂತರ ಉಳಿದ ಇಬ್ಬರು ಆರೋಪಿಗಳೂ ಕೂಡ ಅತ್ಯಾಚಾರ ಎಸಗಿದ್ದಾರೆಂಬ ಆರೋಪ ಕೇಳಿಬಂದಿದ್ದು, ಪ್ರಮುಖ ಆರೋಪಿ ಅಲ್ತಾಫ್ ಹಾಗೂ ಬಿಯರ್ ತಂದು ಕೊಟ್ಟ ಸುಬೇರ್ ಸೇರಿ ಇಬ್ಬರು ಆರೋಪಿಗಳನ್ನು ಕಾರ್ಕಳ ನಗರ ಪೋಲಿಸರು ಬಂಧಿಸಿದ್ದಾರೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 145/2024 ಕಲಂ: 138,64 ಜೊತೆಗೆ 3(5) BNS 2023 ರಂತೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡ ಆರೋಪಿಯ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ.