ಕರಾವಳಿ ಸಮೃದ್ಧಿ ಫಿಶ್ ಫಾರ್ಮರ್ಸ್ ಪ್ರೊಡ್ಯೂಸರ್ ಕೋ ಆಪರೇಟಿವ್ ಸೊಸೈಟಿಯಿಂದ ಅಗಸ್ತ್ಯೇಶ್ವರ ಫಿಶಮಾರ್ಟನ ಶುಭಾರಂಭ.
ನಾಗೂರು : ಎನ್. ಸಿ .ಡಿ .ಸಿ., ಮೀನುಗಾರಿಕಾ ಇಲಾಖೆ ಹಾಗೂ ಸ್ಕೋಡವೇಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಕರಾವಳಿ ಸಮೃದ್ಧಿ ಫಿಶ್ ಫಾರ್ಮರ್ಸ್ ಪ್ರೊಡ್ಯೂಸರ್ ಕೋ ಆಪರೇಟಿವ್ ಸೊಸೈಟಿ ಕೊಡೇರಿ ಇದರಿಂದ ಮೀನುಗಾರರಿಂದ ಗ್ರಾಹಕರಿಗೆ ನೇರವಾಗಿ ಮೀನುಗಳನ್ನು ಪೂರೈಸುವ ಉದ್ದೇಶದಿಂದ ಅಗಸ್ತೇಶ್ವರ ಫಿಶ್ ಮಾರ್ಟ ಇಲ್ಲಿನ ಶ್ರೀದೇವಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ನಿವೃತ್ತ ಸಹಕಾರ ಸಂಘಗಳ ಸಹಾಯಕ ಪ್ರಬಂಧಕ ಅರುಣ ಕುಮಾರ್ ಫಿಶಮಾರ್ಟನ್ನು ದೀಪ ಬೆಳಗಿ ಉದ್ಘಾಟಿಸಿದರು. ಸರ್ಕಾರದ ಯೋಜನೆಯ ಅಡಿಯಲ್ಲಿ ರಚಿತವಾದ ಈ ಸಂಸ್ಥೆಯಿಂದ ಮೀನುಗಾರರಿಗೆ ಹೆಚ್ಚಿನ ಲಾಭ ಜೊತೆಗೆ ಗ್ರಾಹಕರಿಗೆ ತಾಜಾ ಮೀನುಗಳು ಉತ್ತಮ ಬೆಲೆಗೆ ಸಿಗುವಂತಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕಿರುಬಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಖಾರ್ವಿ, ತಿರುಮಂಜೇಶ್ವರ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಟಿ ನಾರಾಯಣ ಖಾರ್ವಿ, ಕೊಡೇರಿಯ ಬಂದರು ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ತುಕಾರಾಮ ಖಾರ್ವಿ, ಶ್ರೀರಾಮ ಸೇವಾ ಸಮಿತಿ ಹಕ್ರೆಮಠ ಇದರ ಅಧ್ಯಕ್ಷ ಚಂದ್ರ ಡಿ.ಖಾರ್,ವಿ ಮಹಾಗಣಪತಿ ಟ್ರಾಲ್ ದೋಣಿ ಸಂಘದ ಅಧ್ಯಕ್ಷ ಮಹೇಶ್ ಖಾರ್ವಿ ಹಾಗೂ ಕರಾವಳಿ ಸಮೃದ್ಧಿ ಫಿಶ್ ಫಾರ್ಮರ್ಸ್ ಪ್ರೊಡ್ಯೂಸಸ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ನಾಗರಾಜ್ ಖಾರ್ವಿ, ಮುಖ್ಯ ಕಾರ್ಯ ನಿರ್ವಾಹಕ ನಾಗೇಶ ಖಾರ್ವಿ, ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಸಹಕಾರಿ ಸಂಘಗಳ ಸಹಾಯಕ ಪ್ರಬಂಧಕ ಅರುಣಕುಮಾರ ಅವರನ್ನು ಸನ್ಮಾನಿಸಲಾಯಿತು