ಬೀದರ್ : ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋಸಮ್ ಗ್ರಾಮ ಪಂಚಾಯತಿಯ ಅಧಿಕಾರಿಗಳಿಬ್ಬರು ರೆಡ್ ಹ್ಯಾಂಡ್ಆಗಿ ಲೋಕಾ ಬಲೆಗೆ ಬಿದ್ದ ಘಟನೆ ನಡೆದಿದೆ.ಕೋಸಮ್ ಗ್ರಾಮ ಪಂಚಾಯತಿಯ ಪಿಡಿಒ ಆಗಿರುವ ರಾಹುಲ್ ಹಾಗೂ ಜೆಇ ಆಗಿರುವ ಸಿದ್ರಾಮೇಶ್ವರ್ ಅವರು ಲೋಕಾ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ .24 ಲಕ್ಷ ರೂ. ಬಿಲ್ ಪಾವತಿಗೆ ಕಮಿಷನ್ ರೂಪದಲ್ಲಿ ಒಂದು ಲಕ್ಷ ಹಣ ಪಡೆಯುವ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಇವರು 24 ಲಕ್ಷ ಬಿಲ್ಗೆ 2.55 ಲಕ್ಷ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಪೈಕಿ ಮುಂಗಡವಾಗಿ ಒಂದು ಲಕ್ಷ ರೂ. ಪಡೆಯುತ್ತಿದ್ದ ವೇಳೆ ಲೋಕಾ ಬಲೆಗೆ ಬಿದ್ದಿದ್ದಾರೆ.ಕೋಸಮ್ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಕೆಲಸ ಮಾಡಿದ್ದ ಗುತ್ತಿಗೆದಾರ ಅರವಿಂದ ಭಾಲ್ಕೆ ಎನ್ನುವವರ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಸ್ ಸ್ಟಾಂಡ್ ಬಳಿ ಕಮಿಷನ್ ಪಡೆಯುತ್ತಿದ್ದ ವೇಳೆ ಲೋಕಾ ದಾಳಿ ಮಾಡಿದೆ.
ಡಿಎಸ್ಪಿ ಹನುಮಂತರಾಯ್ ಹಾಗೂ ಇನ್ಸ್ಪೆಕ್ಟರ್ ಬಾಬಾಸಾಹೇಬ್ ಪಾಟೀಲ್ ನೇತೃತ್ವದಲ್ಲಿ ಎರಡು ತಂಡಗಳಾಗಿ ಪ್ರತ್ಯೇಕ ದಾಳಿ ಮಾಡಲಾಗಿದ್ದು, ಕಮಿಷನ್ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಅಧಿಕಾರಿಗಳು ಸಿಕ್ಕಿ ಬಿದ್ದಿದ್ದಾರೆ.