ಸಿದ್ದಾಪುರ: ತಾಲೂಕಿನ ತಂಡಾಗುAಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಕುಳ್ಳೆ ಗ್ರಾಮದ ಸಂಭಾಗಣದಲ್ಲಿ ಅಕ್ಟೋಬರ್ ೧೪ ಸಾಯಂಕಾಲ ೩ ಗಂಟೆಗೆ ನಿಲ್ಕುಂದ, ಹೆಗ್ಗರಣಿ ಮತ್ತು ತಂಡಾಗುAಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯ ಅತಿಕ್ರಮಣದಾರರ ಸಭೆ ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೋಂದಾಯಿತ ಸದಸ್ಯರಿಗೆ ಜಿಪಿಎಸ್ ಮೇಲ್ಮನವಿ ಸ್ವೀಕೃತಿ ಪ್ರತಿ, ಗುರುತಿನ ಪತ್ರ ವಿತರಿಸಲಾಗುವ ಸಭೆಯಲ್ಲಿ ನ.೭ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೆಂಗಳೂರು ಚಲೋ ಕಾರ್ಯಕ್ರಮ ಕುರಿತು ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಆಸಕ್ತರು ಸಭೆಗೆ ಆಗಮಿಸಲು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ನೀಡಿದ್ದಾರೆ.