ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ಕಸಬಾ ಹೋಬಳಿ ಘಟಕದ ವತಿಯಿಂದ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ
ಮೂಡಿಗೆರಿ-ದಿನಾಂಕ :01.11.2024 ರಾವ್8ವಾರ ರಂದು ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ಕಸಬಾ ಹೋಬಳಿ ಘಟಕದ ವತಿಯಿಂದ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮವನ್ನು ಮೂಡಿಗೆರೆಯ ಹೆಸಗಲ್ ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಕಸಬಾ ಹೋಬಳಿ ಘಟಕದ ಅಧ್ಯಕ್ಷರಾದ ಕುನ್ನಳ್ಳಿ ರವಿ ಅವರು ವಹಿಸಿದ್ದರು. ಹೆಸ್ಗಲ್ ಗ್ರಾಮದ ಕಲಾಜ್ಯೋತಿ ತಂಡದವರು ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಕೆ. ಲಕ್ಷ್ಮಣ್ ಗೌಡ್ರು ಉದ್ಘಾಟಿಸಿದರು. ಜಿಲ್ಲಾ ಸಂಚಾಲಕರಾದ ಶಾಂತಕುಮಾರ್ ರವರು ನಾಡದೇವಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸಿ, ಮಾತನಾಡಿದರು. ಗ್ರಾಮದ ಹವ್ಯಾಸಿ ತಂಡದವರು ಜಾನಪದ ಹಾಡು, ಸೋಬಾನೆ ಹಾಡು ಹಾಡುವ ಮೂಲಕ ಗ್ರಾಮದ ಗ್ರಾಮೀಣ ಸೊಗಡನ್ನು ಬಿಂಬಿಸಿದರು. ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ನವೀನ್.ಬಿ.ಆರ್, ವಿದ್ಯಾ, ಗ್ರಾಮದ ಮುಖಂಡರಾದ ಕುಮಾರ್ ,ವಸಂತಯ್ಯ, ಹೆಸಗಲ್ ಗಿರೀಶ್ , ಹೆಸ್ಗಲ್ ಭರತ್, ಗ್ರಾಮ ಪಂಚಾಯತಿ ಸದಸ್ಯರಾದ ಹಾಲಮ್ಮ, ಕಸಾಪ ಪ್ರಧಾನ ಸಂಚಾಲಕರಾದ ಎಂ .ಎಸ್ ನಾಗರಾಜ್ , ಗ್ರಾಮಸ್ಥರು, ಕಲಾ ಜ್ಯೋತಿ ಯುವತಿ ಮಂಡಳಿಯವರು, ಗ್ರಾಮದ ಯುವಕರು ಜೆಸಿಐ ಅಧ್ಯಕ್ಷರಾದ ಪ್ರದೀಪ್, ಚಂದ್ರಶೇಖರ್, ಯಾಕೂಬ್ , ಮೊ.ಜುಬೇರ್, ಯೋಗೇಂದ್ರ,ಹಾಜರಿದ್ದರು.