ಸಾಗರ-ತಾಳಗುಪ್ಪ ಶಾಖೆಯ ಅರಣ್ಯ ಉಪವಿಭಾಗಾಧಿಕಾರಿ ಹಾಗೂ ಸಾಗರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎನ್. ರನ್ನ ಸೇವೆಯಿಂದ ಅಮಾನತ್ತು ಪಡಿಸಿ ಆದೇಶಿಸಲಾಗಿದೆ.
ಅಕೇಶಿಯಾ ಮರಗಳ ಕಡಿತಲೆಯ ಪ್ರಕ್ರಣಗಳಿಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಕಂಡು ಬಂದಿರುವ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತ್ತು ಪಡಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶಿಸ್ತು ಶಿಸ್ತುಪ್ರಾಧಿಕಾರ ಆದೇಶಿಸಿದ್ದಾರೆ.
ತಾಳಗುಪ್ಪ ಹೊಸಳ್ಳಿ ಗ್ರಾಮದ ಸ.ನಂ. 11, 31, 141, 1420 ಹಂಸಗಾರು ಮತ್ತು ಗಿಳಿಗಾರು ಗ್ರಾಮಗಳ ವ್ಯಾಪ್ತಿಯಲ್ಲಿ ಅಕೇಶಿಯ ಮರಗಳ ಅಕ್ರಮವಾಗಿ ಕಡಿತಲೆ-ಸಾಗಾಣಿಕೆಯಾಗಿದ್ದು, 401 ಅಕೇಶಿಯಾ ಮರಗಳ ಕಡಿತಲೆಯಾಗಿದ್ದು ಇದರಲ್ಲಿ 53 ಪ್ರಕರಣಗಳ ಬಗ್ಗೆ ದೂರು ದಾಖಲಿಸಿರುವ ಉಪವಿಭಾಗಾಧಿಕಾರಿಗಳು ಉಳಿದ ಪ್ರಕರಣಗಳಿಗೆ ಕ್ರಮ ಜರುಗಿಸದ ಹಿನ್ನಲೆಯಲ್ಲಿ ಕರ್ತವ್ಯ ಲೋಪ ಆರೋಪದಲ್ಲಿ ಸೇವೆಯಿಂದ ಅಮಾನತ್ತು ಪಡಿಸಲಾಗಿದೆ.
ಸೋಷಿಯಲ್ ಮೀಡಿಯಾ ಹಾಗೂ ಪತ್ರಿಕೆಯ ಆಧಾರದ ಮೇರೆಗೆ ಕ್ರಮ
ದಿನಾಂಕ:19-10-2024 ರಂದು ದಿನ ಪತ್ರಿಕೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತಾಳಗುಪ್ಪ ಹೋಬಳಿ ಹೊಸಳ್ಳಿ ಗ್ರಾಮದ ಸ.ನಂ.11, 31, 141, 142ರ ಹಂಸಗಾರು ಮತ್ತು ಗಿಳಿಗಾರು ಗ್ರಾಮಗಳ ವ್ಯಾಪ್ತಿಯಲ್ಲಿ ಅಕೇಶಿಯ ಮರಗಳ ಅಕ್ರಮವಾಗಿ ಕಡಿತಲೆ-ಸಾಗಾಟದ ಕುರಿತಾಗಿ ವರದಿಯಾಗಿದ್ದು ಇದರಲ್ಲಿ ಶಾಖೆ ಹಾಗೂ ಗಸ್ತಿನ ಸಿಬ್ಬಂದಿಗಳು ಶಾಮೀಲಾಗಿರುವ ಬಗ್ಗೆ ಅರಣ್ಯ ಸಂಚಾರಿದಳದಿಂದ ಸ್ವತಂತ್ರ ತನಿಖೆ ನಡೆಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ನೀಡಿದ ನಿರ್ದೇಶನದಂತೆ ಕೂಲಂಕುಷವಾಗಿ ತನಿಖೆ ನಡೆಸಿ ದಾಖಲೆಗಳೊಂದಿಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿದಳ ಶಿವಮೊಗ್ಗ ಇವರಿಗೆ ಸೂಚಿಸಲಾಗಿತ್ತು. ಸದರಿ ಸೂಚನೆಯಂತೆ ಉಲ್ಲೇಖ (2) ರಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿದಳ ಶಿವಮೊಗ್ಗ ಇವರು ತನಿಖೆ ಕೈಗೊಂಡು ತನಿಖಾ ವರದಿಯ ಪ್ರಕಾರ ಮುಖ್ಯ ಅರಣ್ಯಾಧಿಕಾರಿಗಳ ಕಚೇರಿ ಶಿವಮೊಗ್ಗ ಇವರ ಆದೇಶದಂತೆ
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ, ಸಂಚಾರಿದಳ ಶಿವಮೊಗ್ಗ, ಇವರ ತನಿಖಾ ವರದಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಗರ ವಿಭಾಗ, ಸಾಗರ ಇವರ ಶಿಫಾರಸ್ಸಿನಂತೆ, ಶ್ರೀ ಸಂತೋಷ್ ಕುಮಾರ್ ಎನ್. ಉಪ ವಲಯ ಅರಣ್ಯಾಧಿಕಾರಿ, ತಾಳಗುಪ್ಪ ಶಾಖೆ ಇವರು ಕರ್ನಾಟಕ ಅರಣ್ಯ ಸಂಹಿತೆ 1976 ರ ನಿಯಮ 124 ថ (ii), (iii), (iv), (v), (vi), (xi), (xii) 2, ಕರ್ತವ್ಯಗಳನ್ನು ನಿರ್ವಹಿಸದೇ ನಿರ್ಲಕ್ಷತೆ ಹಾಗೂ ಕರ್ತವ್ಯ ಲೋಪ ಎಸಗಿ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿ 2021 (ತಿದ್ದುಪಡಿ) ರ ನಿಯಮ 3(1)(@Gi)(ii) ನ್ನು ಉಲ್ಲಂಘಿಸಿರುವುದರಿಂದ, ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಫಿಲು) ನಿಯಮಾವಳಿ 1957 ರ ನಿಯಮ 10(1)ಡಿ ರಲ್ಲಿ ಈ ಕೆಳ ಸಹಿದಾರರಿಗೆ ದತ್ತವಾದ ಅಧಿಕಾರದಂತೆ ಶ್ರೀ ಸಂತೋಷ್ ಕುಮಾರ್ ಎನ್. ಉಪ ವಲಯ ಅರಣ್ಯಾಧಿಕಾರಿ ತಾಳಗುಪ್ಪ ಶಾಖೆ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಮೇಲಿನ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಕರ್ತವ್ಯದಿಂದ ಅಮಾನತ್ತು ಪಡಿಸಿ ಆದೇಶಿಸಿದೆ.
ಅಮಾನತ್ತಿನ ಅವಧಿಯಲ್ಲಿ ಸದರಿ ನೌಕರರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957 ರ ನಿಯಮ 97 (ಎ) ಮತ್ತು 104(1) ರ ನಿಬಂಧನೆಗೊಳಪಟ್ಟು ನಿಯಮ 98 (1)ರ ಮೇರೆಗೆ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಹಾಗೂ ಅಮಾನತ್ತಿನ ಅವಧಿಯಲ್ಲಿ ವಲಯ ಕಛೇರಿಯನ್ನು ಕೇಂದ್ರಸ್ಥಾನವನ್ನಾಗಿ ನಿಗಧಿಪಡಿಸಿದ್ದು ಅನುಮತಿಯಿಲ್ಲದೇ ಕೇಂದ್ರಸ್ಥಾನವನ್ನು ಬಿಡಬಾರದಾಗಿ ಸೂಚಿಸಲಾಗಿದೆ.