ಅಂಕೋಲಾ-ಅಂಕೋಲ ತಾಲೂಕಿನ ಸರ್ವೆ ಇಲಾಖೆಯಲ್ಲಿ ( ಎ.ಡಿ.ಎಲ್.ಆರ ಆಫೀಸ್ )ನಲ್ಲಿ ಸಾರ್ವಜನಿಕ ಕೆಲಸಗಳು ವಿಳಂಬವೋ -ವಿಳಂಬ ಎಂಬ ಶಿರೋನಾಮೆಯಲ್ಲಿ ಕನ್ನಡ ಟುಡೇ ನ್ಯೂಸ್ ನಲ್ಲಿ ದಿನಾಂಕ 1-02-2025 ರಂದು ಸುದ್ದಿ ಪ್ರಕಟವಾಗಿತ್ತು.. ಅಂಕೋಲ ತಾಲೂಕಿನಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ಸರ್ವೇ ದಾಖಲೆಗಳು ದೊರಕದೇ ಇರುವುದು.11 ಈ ನಕ್ಷೆಗಳು ಸಿದ್ಧಪಡಿಸಲು ವಿಳಂಬ ಆಗಿರುತ್ತಿರುವುದು. ತಾಲೂಕಿನಲ್ಲಿ ಸರ್ವೇ ಅಧಿಕಾರಿಗಳ ಕೊರತೆ. ವಾರಕ್ಕೆ 1 ಸಲ ಬಂದು ಹೋಗುವ ಭೂ ದಾಖಲೆಗಳ ಸಹಾಯ ನಿರ್ದೇಶಕರಿಂದ ಕಡತಗಳು ಸಮಯಕ್ಕೆ ವಿಲೇವಾರಿಯಾಗುತ್ತಿಲ್ಲ. ಮುಂತಾದ ವಿಷಯಗಳ ಕುರಿತು ಸಾರ್ವಜನಿಕರು ಹೈರಾಣಾಗುತ್ತಿರುವ ಬಗ್ಗೆ ಸುದ್ದಿ ಪ್ರಕಟಿಸಲಾಗಿತ್ತು.
ಸದರಿ ಕನ್ನಡ ಟುಡೇ ನ್ಯೂಸ್ ಬಿತ್ತರವಾಗಿರುವ ಅಂಕೋಲಾ, ಸರ್ವೆ ಇಲಾಖೆಯ ಸುದ್ದಿ ಯನ್ನು ಗಂಭೀರವಾಗಿ ಪರಿಗಣಿಸಿದ ಕನ್ನಡ ಟುಡೇ ನ್ಯೂಸ್ ಸುದ್ದಿ ಆಧಾರದಲ್ಲಿ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ್ ಭೂ ದಾಖಲೆಗಳ
ಉಪನಿರ್ದೇಶಕರಾದ ಸಂದೀಪ್ ಉಪ್ಪಾರ್ ರವರು ಸೂಕ್ತ ಆದೇಶವನ್ನು ಹೊರಡಿಸಿದ್ದು.ಅಂಕೋಲಾ ತಾಲೂಕಿನಲ್ಲಿ ಪ್ರಭಾರಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಪ್ರಸನ್ನ ಜೈ ಕುಮಾರ ರವರು ಅಂಕೋಲಾ ತಾಲೂಕ ಕೇಂದ್ರ ಸ್ಥಾನದಲ್ಲಿ 03 ದಿನ ಕಡ್ಡಾಯವಾಗಿ ಹಾಜರಿರಬೇಕು.ಸಾರ್ವಜನಿಕರಿ ಗೆ ಸರಿಯಾದ ಮಾಹಿತಿ ನೀಡುವ ಬಗ್ಗೆ ಕಟ್ಟು ನಿಟ್ಟಿನ ಕ್ರಮ ವಹಿಸಬೇಕು . ದುರ್ನಡತೆ/ ಕರ್ತವ್ಯ ನಿರ್ಲಕ್ಷತನ ತೋರುವ ನೌಕರರ ಮೇಲೆ ಶಿಸ್ತು ಕ್ರಮ ಜರುಗಿಸಲು ಸೂಕ್ತ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲು ಅಂಕೋಲಾ ಸರ್ವೆ ಇಲಾಖೆಗೆ ನಿರ್ದೇಶಿಸಲಾಗಿದೆ.ಅಂಕೋಲಾ ಸರ್ವೇ ಇಲಾಖೆಯ ಲ್ಲಿ ಈಗಾಗಲೇ ಭಾಕಿ ಇರುವ ಕಡತಗಳ ಬಗ್ಗೆ ವರದಿ ಕೇಳಲಾಗಿದೆ.
ಭೂ ದಾಖಲೆಗಳ ಉಪ ನಿರ್ದೇಶಕರ ಆದೇಶ ಬರುತಿದ್ದಂತೆಯೇ ಅಂಕೋಲಾ ಸರ್ವೆ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬದ ಬಗ್ಗೆ ಕಾರಣಗಳು ಹಾಗೂ ಪರಿಹಾರ ಕ್ರಮದ ಬಗ್ಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಇಂದು ಮಧ್ಯಾಹ್ನ 3 ಗಂಟೆಗೆ ಎಲ್ಲಾ ಸಿಬ್ಬಂದಿಗಳಿಗೆ ಸಭೆಗೆ ಕರೆದಿದ್ದಾರೆ ಎನ್ನಲಾಗಿದ್ದು.. ಇನ್ನು ಮುಂದಿನ ದಿನಗಳಲ್ಲಿ ಅಂಕೋಲಾ ಸರ್ವೆ ಇಲಾಖೆ ಅಧಿಕಾರಿಗಳ ಕಾರ್ಯ ಮತ್ತು ಸಾರ್ವಜನಿಕರೊಂದಿಗೆ ಅವರ ನಡೆ ಸುಧಾರಿಸಬಹುದೇ ಎಂದು ಕಾದು ನೋಡಬೇಕಾಗಿದೆ.