ಭಟ್ಕಳ-ಬೆಂಗಳೂರಿನ ಕಲಾ ನವೀನ್ ಫೀಲಂ ಅಕಾಡೆಮಿ ಆಯೋಜಿಸಿದ `ಮಿಸ್ ಗ್ರಾಂಡ್ ಸೌತ್ ಇಂಡಿಯಾ 2024-25 ಫ್ಯಾಷನ್ ಶೋ’ ಸ್ಪರ್ಧೆಯಲ್ಲಿ ಭಟ್ಕಳದ ಸಂಜನಾ ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾರೆ. ಆ ಮೂಲಕ ಸ್ಪರ್ಧೆಯ ಚಾಂಪಿಯನ್ಶಿಫ್’ನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ.
ಬೆoಗಳೂರಿನ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಚಲುವೆಯರು ಬಂದಿದ್ದರು. ಆದರೆ, ಅವರೆಲ್ಲರನ್ನು ಸಂಜನಾ ನಾಯ್ಕ ಮೀರಿಸಿ ಹೆಜ್ಜೆ ಹಾಕಿದರು. `ಮಿಸ್ ಸೌಥ್ ಗ್ರಾಂಡ್ ಪದಕ’ ಪಡೆದ ಅವರು `ಮಿಸ್ ಇಂಡಿಯಾ’ ಹಾಗೂ ಹೊರದೇಶಗಳಲ್ಲಿ ನಡೆಯುವ ಪ್ಯಾಶನ್ ಶೋ’ಗಳಿಗೆ ಆಯ್ಕೆಯಾದರು.
ಸಂಜನಾ ನಾಯ್ಕ ಅವರು ಬೆಂಗಳೂರಿನ ಬೆಂಗಳೂರು ಇನ್ಸಟೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ದ್ವಿತಿಯ ವರ್ಷದ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಅವರು ಭಟ್ಕಳದ ತಲಾಂದ ಗ್ರಾಮದ ಹೂವಿನಹಿತ್ಲು ಮನೆಯ ನಾರಾಯಣ ನಾಯ್ಕ ಹಾಗೂ ಸುನಿತಾ ದಂಪತಿಯ ಪುತ್ರಿ.