ಭಟ್ಕಳ-ಪೂಣೆಯಿಂದ ಕೇರಳಕ್ಕೆ ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಭಟ್ಕಳದ ಬಸ್ತಿಯಲ್ಲಿ ಭಾನುವಾರ ಪಲ್ಟಿಯಾಗಿದೆ. ಪರಿಣಾಮ ಹೆದ್ದಾರಿ ತುಂಬ ರಾಸಾಯನಿಕ ಚೆಲ್ಲಿದ್ದು, ಅಗ್ನಿಶಾಮಕ ಸಿಬ್ಬಂದಿ ಮುನ್ನಚ್ಚರಿಕೆಯಿಂದ ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ.
ಕೇರಳಕ್ಕೆ ಹೊರಟಿದ್ದ ಸ್ಪಿರಿಟ್ ತುಂಬಿದ ಲಾರಿ ಮುರುಡೇಶ್ವರ ಬಸ್ತಿ ಬಳಿ ಪಲ್ಟಿಯಾಗಿದೆ.ಲಾರಿ ಪಲ್ಟಿಯಾದ ಪರಿಣಾಮ ದ್ರಾಕ್ಷರಸಕ್ಕೆ ಬಳಸುವ ಸ್ಪಿರಿಟ್ ಮೂಟೆಗಳು ರಸ್ತೆಯಲ್ಲಿ ಬಿದ್ದವು. ಅಬಕಾರಿ ಇಲಾಖೆಯ ಸುಪರ್ದಿಯಲ್ಲಿ ಸ್ಪಿರಿಟ್ ತುಂಬಿದ ಲಾರಿ ಸಾಗುತ್ತಿತ್ತು. ಲಕ್ಷಾಂತರ ಬೆಲೆಯ ಸಾವಿರಾರು ಲೀಟರ್ ಸ್ಪಿರಿಟ್ ತುಂಬಿದ ಮೂಟೆಗಳು ರಸ್ತೆಯಲ್ಲಿ ಬಿದ್ದಿವೆ. ಇದರ ತೆರವು ಕಾರ್ಯ ನಡೆಯುತ್ತಿದೆ. ಕೆಲ ಸಮಯ ಹೆದ್ದಾರಿ ಸಂಚಾರಕ್ಕೆ ಅಡಚಣೆಯಾಗಿತ್ತು.
ಹೊನ್ನಾವರ ಕಡೆಯಿಂದ ಮಂಗಳೂರು ಮಂಗಳೂರು ಕಡೆ ಟ್ಯಾಂಕರ್ ಚಲಿಸುತ್ತಿತ್ತು. ಬಸ್ತಿ ಬಳಿ ವಾಹನ ಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ ಹೆದ್ದಾರಿ ಅಂಚಿನಲ್ಲಿ ಟ್ಯಾಂಕರ್ ಪಲ್ಟಿಯಾಯಿತು. ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಕ್ಲಿನರ್’ಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಕ್ಯಾಮಿಕಲ್ ತುಂಬಿದ ಲಾರಿ ಅಪಘಾತ ನೋಡಿದ ಜನ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಕರೆ ಮಾಡಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಯಾವುದೆ ತೊಂದರೆಯಾಗದOತೆ ಫೋಮ್ ಸಿಂಪಡಿಸಿದರು. ಈ ವೇಳೆ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಮೋಹನ್ ಶೆಟ್ಟಿ, ಸಿಬ್ಬಂದಿ ಗಜಾನನ ದೇವಾಡಿಗ, ಸುಧಾಕರ್ ದೇವಾಡಿಗ, ಶಿವಪ್ರಸಾದ್ ನಾಯ್ಕ್, ನಾರಾಯಣ ಪಟಗಾರ ಅಪಾಯ ಆಗದಂತೆ ಕಟ್ಟೆಚ್ಚರವಹಿಸಿದ್ದರು.