ಬೈಂದೂರು: ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಬಿ. ಆರ್ ಅಂಬೇಡ್ಕರ್ ತತ್ವ ಸಿದ್ಧಾಂತದ ಅಡಿಯಲ್ಲಿ ಅಂಬೇಡ್ಕರ್ ಸೇನೆ( ರಿ) ನಿರಂತರ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಶಿಕ್ಷಣ, ಸಂಘಟನೆ, ಹೋರಾಟ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುತ್ತದೆ,
ಶೋಷಿತ ಸಮುದಾಯಗಳ ಪರವಾಗಿ ನಿರಂತರ ಶ್ರಮಿಸುತ್ತಾ ರಾಜ್ಯಾದ್ಯಂತ ಗುರುತಿಸಿಕೊಂಡಿರುವ ಸಂಘಟನೆ ಅಂಬೇಡ್ಕರ್ ಸೇನೆ ಆಗಿದ್ದು, ಉಡುಪಿ ಜಿಲ್ಲೆಗೆ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಸಮಾಜದ ಎಲ್ಲಾ ಶೋಷಿತ ವರ್ಗದವರನ್ನು ಕೂಡಿಕೊಂಡು ಅಂಬೇಡ್ಕರ್ ಸೇನೆ ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಡಾ. ಪಿ. ಮೂರ್ತಿ ಯವರು ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ಸಮಾಜ ಸೇವಕ ಯುವ ಮುಖಂಡ ಸತೀಶ್ ಕಂಚುಗೋಡು
ರವರನ್ನು ನೇಮಿಸಲಾಯಿತು. ಈ ವೇಳೆ ಬೆಂಗಳೂರು ವರವಲಯದ ಚನ್ನರಾಯಪಟ್ಟಣದಲ್ಲಿ ನಡೆದ ದಲಿತ ಬೃಹತ್ ಸಮಾವೇಶದಲ್ಲಿ ಗಣ್ಯರ ಸಮ್ಮುಖದಲ್ಲಿ ಗೌರವಿಸಿ ಸನ್ಮಾನಿಸಲಾಯಿತು,
ಈ ಸಂದರ್ಭದಲ್ಲಿ ಚಿತ್ರನಟ ಚೇತನ್, ಒರಟ ಸಿನಿಮಾದ ನಿರ್ದೇಶಕ ಶ್ರೀ ಯವರು , ಕಾರ್ಕಳ ಸತೀಶ್ ಕುಮಾರ್ ಬೈಲೂರು, ಗೋಪಾಲ್ ಮೊಗವೀರ ಕವ್ರಾಡಿ, ದಾಮೋದರ ಮೊಗವೀರ ನಾಯಕವಾಡಿ , , ಪ್ರಸಾದ್ ಕುಮಾರ್ ಶೆಟ್ಟಿ ಕಾರ್ಕಳ, ಹಾಗೂ ಗಣ್ಯತಿ ಗಣ್ಯರು ಮತ್ತು ಅಂಬೇಡ್ಕರ್ ಸೇನೆಯ ಸರ್ವ ಪದಾಧಿಕಾರಿಗಳು ಹಾಜರಿದ್ದರು.