ಭಟ್ಕಳ-ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಭಟ್ಕಳ ದಲ್ಲಿ ವಿಜ್ಞಾನ ಮೇಳ ಕಾರ್ಯಕ್ರಮ ಸಂಭ್ರಮದಿಂದ
ಆಚರಿಸಲಾಯುತು.ಮಕ್ಕಳು ಪ್ರಾರ್ಥನೆ ಮಾಡುವುದರ ಮೂಲಕ ಸಭಾ ಕಾರ್ಯಕ್ರಮ ಆರಂಭಿಸಲಾಯಿತು.
ಶ್ರೀಮತಿ. ವೀಣಾ ಪೈ, ಅಧ್ಯಕ್ಷರು ವನಿತಾ ಮಹಿಳಾ ಮಂಡಳ ಭಟ್ಕಳ ಇವರು ವಿಜ್ಞಾನ ಜ್ವಾಲಾಮುಖಿ ಮಾದರಿ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಮ್ ಸಿ ಅಧ್ಯಕ್ಷರಾದ ಶ್ರೀ. ದೇವಿದಾಸ ನಾಯ್ಕ ವಹಿಸಿದ್ದರು.
ಕಾರ್ಯಕ್ರಮ ಕ್ಕೆ ಮುಖ್ಯ ಅಥಿತಿಗಳಾಗಿ ಅಗಮಿಸಿದ ಶ್ರೀ. ಎಮ್ ಎನ್. ನಾಯ್ಕ ಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ ರವರು ವಿಜ್ಞಾನ ಮತ್ತು ಮೌಡ್ಯತೆ ಬಗ್ಗೆ ವಿಚಾರ ಮಂಡಿಸಿದರು. ಶ್ರೀ. ಬಿ. ಕೆ. ನಾಯ್ಕ ರವರು ವಿಜ್ಞಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಶ್ರೀ ಗೋಪಾಲ ನಾಯ್ಕ ಸಿ. ಆರ್. ಪಿ ಹಾಗೂ ಬಿ. ಅಯ್. ಆರ್. ಟಿ ಭಟ್ಕಳ ರವರು ಮಕ್ಕಳಿಗೆ ವಿಜ್ಞಾನ ಕಲಿಕೆ ಬಗ್ಗೆ ತಿಳಿಸಿ ಕೊಟ್ಟರು. ಶ್ರೀಮತಿ ಪಿ. ಎ. ಗೊಮ್ಸ್, ಮುಖ್ಯೋಪಾಧ್ಯಾಯರು ವಿಜ್ಞಾನ ಮೇಳದ ಬಗ್ಗೆ ಫ್ರಾ ಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ. ಪ್ರತಿಮಾ ಆಚಾರಿ,ಸಹ ಶಿಕ್ಷಕರು, ಕಾರ್ಯ ಕ್ರಮದ ನಿರೂಪಣೆ ಮಾಡಿದರು. ಶ್ರೀಮತಿ. ಮಹಾಲಕ್ಷ್ಮಿ ಪಟಗಾರ ರವರು ವಂದನಾರ್ಪಣೆ ಮಾಡಿದರು. ಶ್ರೀಮತಿ. ಭಾಗೀರತಿ ನಾಯ್ಕ ರವರು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲು ಸಹಕರಿಸಿದರು. ಶ್ರೀಮತಿ ವೀಣಾ ನಾಯ್ಕ ಅತಿಥಿ ಶಿಕ್ಷಕಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ನಂತರ ಮಕ್ಕಳು ತಾವೇ ತಯಾರಿಸಿದ ವಿಜ್ಞಾನ ವಸ್ತು ಪ್ರದರ್ಶನ ಪ್ರಚುರಪಡಿಸಿ ಪಾಲಕರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಶ್ರೀಮತಿ.ಮಮತಾ ದೇವಾಡಿಗ ಉಪಾಧ್ಯಕ್ಷರು ಹಾಗೂ ಎಸ್ ಡಿ. ಎಮ್ ಸಿ. ಸದಸ್ಯರು ಮತ್ತು ಪಾಲಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಎಸ್.ಡಿ.ಎಂ.ಸಿ. ಯವರು ಬಹುಮಾನ ಪ್ರಾಯೋಜಕತ್ವ, ಶ್ರೀ ವಿಲ್ಸನ್ ರೋಡ್ರಿಗಸ ಶಿಕ್ಷಕರು, ಉಪಹಾರದ ವ್ಯವಸ್ಥೆ ಹಾಗೂ ಶ್ರೀಮತಿ. ವೀಣಾ ಪೈ ಮೇಡಂ ರವರು ಅಯ್ಸಕ್ರೀಮ್ ವ್ಯವಸ್ಥೆಯನ್ನು ಉಚಿತವಾಗಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.