ಭಟ್ಕಳ-ಭಟ್ಕಳದ ಅಂಜುಮನ ಪ್ರೈಮೇರಿ ಉರ್ದು ಸ್ಕೂಲ್’ನ ವಾಹನ ಅಪಘಾತವಾಗಿದೆ. ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ಮರಳುತ್ತಿದ್ದ ಶಾಲಾ ವಾಹನ ಕ್ವಾಲಿಟಿ ಹೋಟಲ್ ಬಳಿ ಲಾರಿ ನಡುವೆ ಅಪಘಾತವಾಗಿದೆ.
ಈ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂಜುಮನ ಪ್ರೈಮೇರಿ ಉರ್ದು ಸ್ಕೂಲ್’ಗೆ ಸೇರಿದ ವಾಹನ ಸೋಮವಾರ ಮಧ್ಯಾಹ್ನ ಮಕ್ಕಳನ್ನು ಮನೆಗೆ ತಲುಪಿಸಿತು. ಅದಾದ ನಂತರ ಮರಳಿ ಶಾಲೆಯ ಕಡೆ ಹೊರಟಿತ್ತು.
ಈ ನಡುವೆ ಕ್ವಾಲಿಟಿ ಹೋಟಲ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಪಘಾತಕ್ಕೀಡಾಯಿತು. ಈ ಅಪಘಾತಕ್ಕೆ ಕಾರಣ ಗೊತ್ತಾಗಿಲ್ಲ. ವಾಹನದಲ್ಲಿದ್ದ ಚಾಲಕ ಹಾಗೂ ನಿರ್ವಾಹಕಿ ಅಪಘಾತದಿಂದ ಪೆಟ್ಟು ಮಾಡಿಕೊಂಡಿದ್ದಾರೆ. ಶಾಲಾ ವಾಹನ ಜಖಂ ಆಗಿದೆ.
ಗಾಯಗೊಂಡ ಇಬ್ಬರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಭಟ್ಕಳ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ